ಸಹೋದರಿಯ ಓದಿಗೆ ಸಹಾಯ ಮಾಡಲು ಟೀ ಮಾರುತ್ತಿರುವ ಬಾಲಕ!

ಶುಕ್ರವಾರ, 30 ಅಕ್ಟೋಬರ್ 2020 (10:48 IST)
ಮುಂಬೈ: ತಂಗಿಯ ಓದಿಗೆ ಸಹಾಯ ಮಾಡಲು ಅಣ್ಣ ಸಣ್ಣ ವಯಸ್ಸಿನಲ್ಲೇ ಕಷ್ಟಪಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡುತ್ತೇವೆ. ಇದೀಗ ಮುಂಬೈನಲ್ಲಿ ಅಂತಹದ್ದೇ ಘಟನೆ ವರದಿಯಾಗಿದೆ.


ತಾಯಿ ಕೆಲಸ ಕಳೆದುಕೊಂಡು ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗಿದ್ದಕ್ಕೆ 14 ವರ್ಷದ ಬಾಲಕ ತನ್ನ ಓದಿಗೆ ತಿಲಾಂಜಲಿಯಿತ್ತು ಅಮ್ಮನ ಜತೆಗೂಡಿ ಟೀ ಮಾರಿ ತಂಗಿಯ ಓದಿಗೆ ಸಹಾಯ ಮಾಡುತ್ತಿದ್ದಾನೆ. ತಂದೆ ತೀರಿಕೊಂಡು 12 ವರ್ಷಗಳಾಗಿವೆ. ಅಮ್ಮ ಶಾಲಾ ಬಸ್ ನ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದಾಯಿತು. ಮನೆಯಲ್ಲಿ ದುಡ್ಡಿಗೆ ಪರದಾಡುವ ಸ್ಥಿತಿ ಎದುರಾದಾಗ ಅಮ್ಮ ಮಾಡಿಕೊಟ್ಟ ಚಹಾವನ್ನು ಮುಂಬೈಯ  ಬೀದಿ ಬೀದಿಗಳಲ್ಲಿ ಮಾರುವ ಕೆಲಸ ಮಾಡಲು ಆರಂಭಿಸಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ. ಸಹೋದರಿ ಆನ್ ಲೈನ್ ಕ್ಲಾಸ್ ಗೆ ಇದರಿಂದ ಸಹಾಯವಾಗುತ್ತಿದೆ. ನನ್ನ ಓದು ಶಾಲೆ ಪುನರಾರಂಭದ ಬಳಿಕ ಮುಂದುವರಿಸುತ್ತೇನೆ ಎನ್ನುತ್ತಿದ್ದಾನೆ. ಈ ಬಾಲಕನ ಶ್ರಮವನ್ನು ಕೊಂಡಾಡಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ