ಗೆಳತಿಯನ್ನು ಖುಷಿ ಪಡಿಸಲು ಹೋಗಿ ಯಡವಟ್ಟು ಮಾಡಿಕೊಂಡ ಗೆಳೆಯ?

ಬುಧವಾರ, 8 ಮಾರ್ಚ್ 2023 (08:41 IST)
ಮುಂಬೈ : ತನ್ನ ಗೆಳತಿಯನ್ನ ಖುಷಿಪಡಿಸಲು ಮುಂದಾದ 41 ವರ್ಷದ ಗೆಳೆಯನೊಬ್ಬ ಮದ್ಯ ಸೇವಿಸಿದ ನಂತರ 2 ವಯಾಗ್ರ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
 
ತನ್ನ ಸ್ನೇಹಿತೆಯೊಂದಿಗೆ ಹೋಟೆಲ್ನಲ್ಲಿ ರೂಮ್ ಮಾಡಿಕೊಂಡಿದ್ದ ವ್ಯಕ್ತಿ, ಮದ್ಯ ಸೇವಿಸಿದ ಬಳಿಕ, ಸಿಲ್ಡೆನಾಫಿಲ್ನ 50 ಎಂಜಿ ಮಾತ್ರೆಗಳನ್ನ ಸೇವಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಇದ್ದಕ್ಕಿದಂತೆ ವಾಂತಿ ಮಾಡಿಕೊಂಡಿದ್ದಾನೆ.

ತನ್ನ ಸ್ನೇಹಿತೆ, ವೈದ್ಯರ ಸಹಾಯ ಪಡೆಯುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ನಂತರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರದೃಷ್ಟವಶಾತ್ ಆಸ್ಪತ್ರೆಗೆ ಬರುವಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ಬಳಿಕ ವೈದ್ಯರು ತಿಳಿಸಿದ್ದಾರೆ. 

ವ್ಯಕ್ತಿಗೆ ಸೆರೆಬ್ರೊವಾಸ್ಕುಲರ್ ನಿಂದ ರಕ್ತಸ್ರಾವವಾಗಿದೆ, ಇದರಿಂದ ಮೆದುಳಿಗೆ ಆಮ್ಲಜನಕದ ಸರಬರಾಜು ಕಡಿಮೆಯಾಗಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ