ಆದ್ರೆ ಮದುವೆ ಎಲ್ಲಿ ನಡೆದಿದೆ, ವಧು ವರರ ಹೆಸರು ಏನು, ಮದುವೆ ಯಾವಾಗ ನಡೆದಿದೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿರುವುದು ಮಾತ್ರ ಅಚ್ಚರಿ ಜತೆಗೆ ಕುತೂಹಲಕ್ಕೆ ಕಾರಣವಾಗಿದೆ.