Dharmasthala: ಪಂಜಾಬ್ ನಲ್ಲಿ ಧರ್ಮಸ್ಥಳ ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್: ಕಾರಣ ಬಹಿರಂಗ

Krishnaveni K

ಸೋಮವಾರ, 19 ಮೇ 2025 (10:00 IST)
Photo Credit: X
ಪಂಜಾಬ್: ಧರ್ಮಸ್ಥಳ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷ ಎಸ್ ಸಾವಿಗೆ ಈಗ ಟ್ವಿಸ್ಟ್ ಸಿಕ್ಕಿದೆ. ಪಂಜಾಬ್ ನ ತನ್ನ ಕಾಲೇಜಿನಲ್ಲಿ ಆಕಾಂಕ್ಷ ಸಾವನ್ನಪ್ಪಿರುವುದಕ್ಕೆ ಈಗ ಕಾರಣ ಸಿಕ್ಕಿದೆ.

ಆಕಾಂಕ್ಷಗೆ ವಿದೇಶದಲ್ಲಿ ಓದುವ ಆಸೆಯಿತ್ತು. ಇದೇ ಕಾರಣಕ್ಕೆ ತನ್ನ ದಾಖಲೆಗಳನ್ನು ತೆಗೆದುಕೊಳ್ಳಲು ಕಾಲೇಜಿಗೆ ಹೋಗಿದ್ದಾಳೆ. ಈ ವೇಳೆ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಪೋಷಕರು ಇದು ಆತ್ಮಹತ್ಯೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ.

ಆದರೆ ಪ್ರಾಥಮಿಕ ತನಿಖೆ ವರದಿ ಪ್ರಕಾರ ಆಕಾಂಕ್ಷ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಅದೇ ಕಾಲೇಜಿನ ಪ್ರಾಧ್ಯಾಪಕ ಬಿಜಿಲ್ ಮ್ಯಾಥ್ಯೂ ಎಂಬ ಮಲಯಾಳಿ ಜೊತೆ ಆಕಾಂಕ್ಷಗೆ ಲವ್ ಇತ್ತು. ಆದರೆ ಆತ ಎರಡು ಮಕ್ಕಳ ತಂದೆ. ಮದುವೆಯಾಗುವಂತೆ ಬಿಜಿಲ್ ಜೊತೆ ಆಕಾಂಕ್ಷ ಜಗಳವಾಡಿದ್ದಳು. ಇದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಇಂದು ಆಕಾಂಕ್ಷ ಮೃತದೇಹ ತವರು ಧರ್ಮಸ್ಥಳಕ್ಕೆ ತಲುಪಲಿದ್ದು, ಬೊಳಿಯೂರು ಮನೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಇದೀಗ ಮಗಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ