ಬ್ರಿಜ್ ಭೂಷಣ್ : ಪೋಕ್ಸೋ ಕೇಸ್ ದಾಖಲಿಸಿದ್ದ ಸಂತ್ರಸ್ತೆ ಅಪ್ರಾಪ್ತೆಯಲ್ಲ

ಶುಕ್ರವಾರ, 9 ಜೂನ್ 2023 (09:41 IST)
ನವದೆಹಲಿ : ಬಿಜೆಪಿ ಸಂಸದ ಬ್ರಿಜ್ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಆಪ್ರಾಪ್ತೆ ಎನ್ನಲಾದ ಸಂತ್ರಸ್ತೆ ಆಗ ಅಪ್ರಾಪ್ತೆ ಆಗಿರಲಿಲ್ಲ ಎನ್ನುವ ವಿಚಾರ ಹೊರ ಬಿದ್ದಿದೆ. ಈ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
 
ಈ ಹಿಂದೆ ಎಫ್ಐಆರ್ನಲ್ಲಿ ಅಪ್ರಾಪ್ತೆಗೆ ಬ್ರಿಜ್ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಸಂತ್ರಸ್ತೆಯ ತಂದೆ ಕಿರುಕುಳಕ್ಕೆ ಒಳಗಾದೆ ಎಂದು ಹೇಳುತ್ತಿರುವ ದಿನಕ್ಕೆ ಆಕೆ ಅಪ್ರಾಪ್ತೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತೆ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ.

ಎಫ್ಐಆರ್ನಲ್ಲಿ ದಾಖಲಿಸಲಾದ ವಯಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಮಾರ್ಪಾಡು ಮಾಡಿಸಿದ್ದೇವೆ. ಹೀಗಾಗಿ ಪೋಕ್ಸೋ ಆರೋಪಕ್ಕೆ ಸಂಬಂಧಿಸಿ ಕೋರ್ಟ್ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ