ಶಾಲೆಯ ಗುಮಾಸ್ತನಿಂದ 4ರ ಬಾಲಕಿಗೆ ಕಿರುಕುಳ
43 ವರ್ಷದ ದೆಹಲಿಯ ಸುಲ್ತಾನಪುರಿ ನಿವಾಸಿ ಬಂಧಿತ ವ್ಯಕ್ತಿ. 4 ವರ್ಷದ ಬಾಲಕಿಯು ಶಾಲೆಯಲ್ಲಿ ಆಟವಾಡುತ್ತಿದ್ದಾಗ ಗುಮಾಸ್ತ ಕಿರುಕುಳ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯು ಗುಮಾಸ್ತನ ವಿರುದ್ಧ ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂತ್ರಸ್ತೆ ನೀಡಿದ ಮಾಹಿತಿಯಂತೆ ಗುಮಾಸ್ತನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಗೆ ನಗರದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ.