ಸ್ನೇಹಿತರ ಜತೆ ಸೇರಿಕೊಂಡು ತಂಗಿಯ ಮಾನಭಂಗ ಎಸಗಿದ ಅಣ್ಣ

ಗುರುವಾರ, 24 ಸೆಪ್ಟಂಬರ್ 2020 (10:33 IST)
ಚಂಡೀಗಢ್ : 15 ವರ್ಷದ ಹುಡುಗಿಯ ಮೇಲೆ 10 ತಿಂಗಳ ಕಾಲ ಆಕೆಯ 19 ವರ್ಷದ ಸಹೋದರ ಮತ್ತು  ಆತನ ಸ್ನೇಹಿತರು ಮಾನಭಂಗ ಎಸಗಿದ ಘಟನೆ ಚಂಡೀಗಢ್ ನಲ್ಲಿ ನಡೆದಿದೆ.

ಹುಡುಗಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ ಆಕೆ 8 ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ.

ಆದಕಾರಣ ವೈದ್ಯರು ಪೊಲಿಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಸಹೋದರ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ