ಆ ಕಾರಣಕ್ಕೆ ಗರ್ಭಿಣಿ ಹೊಟ್ಟೆಗೆ ಒದ್ದರು : ಮುಂದೇನಾಯ್ತು?

ಮಂಗಳವಾರ, 15 ಸೆಪ್ಟಂಬರ್ 2020 (19:51 IST)
ಗರ್ಭಿಣಿಯೊಬ್ಬರ ಹೊಟ್ಟೆಗೆ ಒದ್ದ ಪರಿಣಾಮ ಆಕೆಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಹಣಕಾಸಿನ ವಿಷಯವಾಗಿ ನಡೆದ ಜಗಳದಲ್ಲಿ ಗರ್ಭಿಣಿ ಹೊಟ್ಟೆಗೆ ಒದ್ದು ಹೊಟ್ಟೆಯಲ್ಲಿದ್ದ ಮಗುವಿನ ಸಾವಿಗೆ ಕೆಲವರು ಕಾರಣವಾಗಿದ್ದಾರೆ ಎಂದು ದೂರಲಾಗಿದೆ. ವ್ಯಕ್ತಿಯೊಬ್ಬ ಖಾಸಗಿ ವ್ಯಕ್ತಿಗಳಿಂದ 1. 2 ಲಕ್ಷ ರೂ. ಗಳ ಸಾಲವನ್ನು ಬಂಗಾರ ಅಡವಿಟ್ಟು ಪಡೆದುಕೊಂಡಿದ್ದನು.

ಆದರೆ ಸಾಲ ಮರುಪಾವತಿ ಮಾಡಿದ್ದಿಲ್ಲ. ಇದರಿಂದ ಕೆರಳಿದ ಏಳು ಜನರ ಗುಂಪು ಮನೆಗೆ ಬಂದು ವ್ಯಕ್ತಿ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ವ್ಯಕ್ತಿಯ ಕುಟುಂಬದವರು ಆರೋಪಿಸಿದ್ದಾರೆ.

ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ