ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡುವ ಹುನ್ನಾರ: ಮಮತಾ ಬ್ಯಾನರ್ಜಿ
ಮಂಗಳವಾರ, 31 ಅಕ್ಟೋಬರ್ 2023 (19:00 IST)
ಕೋಲ್ಕೊತ್ತಾ: ಭಾರತದ ಸಂಸ್ಕೃತಿ, ಪರಂಪರೆಯನ್ನು ನಾಶ ಮಾಡುವುದೇ ಬಿಜೆಪಿಯ ಮುಖ್ಯ ಅಜೆಂಡಾ ಎಂದು ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ತಾಜ್ ಮಹಲ್ ಬಗ್ಗೆ ಬಿಜೆಪಿ ನಾಯಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಈ ರೀತಿ ತಿರುಗೇಟು ನೀಡಿದ್ದಾರೆ.
ಭಾರತದ ಭವ್ಯ ಪರಂಪರೆಯನ್ನು ನಾಶ ಮಾಡುವ ಬಿಜೆಪಿಯ ವ್ಯವಸ್ಥಿತ ಹುನ್ನಾರವಿದು. ತಾಜ್ ಮಹಲ್ ಹೆಸರನ್ನು ಅವರು ಹೇಗೆ ಕೈ ಬಿಡಲು ಸಾಧ್ಯ? ಮುಂದೊಂದು ದಿನ ಭಾರತದ ಹೆಸರನ್ನೂ ಬದಲಾಯಿಸಿದರೂ ಅಚ್ಚರಿಯಿಲ್ಲ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.