ಭೃಷ್ಟಾಚಾರ ಆರೋಪಕ್ಕೆ ನೊಂದು ಸಾವಿಗೆ ಶರಣಾದ ಸಂಪೂರ್ಣ ಕುಟುಂಬ

ಬುಧವಾರ, 28 ಸೆಪ್ಟಂಬರ್ 2016 (08:34 IST)
ಭೃಷ್ಟಾಚಾರ ಆರೋಪ ಹೊತ್ತು ಸಿಬಿಐ ತನಿಖೆಯನ್ನೆದುರಿಸುತ್ತಿದ್ದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಮಾಜಿ ಅಧಿಕಾರಿ ಬಿ.ಕೆ. ಬನ್ಸಾಲ್ ಹಾಗೂ ಅವರ ಪುತ್ರ ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೂರ್ವ ದೆಹಲಿಯ ಮಧುವಿಹಾರ ಪ್ರದೇಶದಲ್ಲಿರುವ ಅಪಾರ್ಟಮೆಂಟ್‌ನಲ್ಲಿ ಅವರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಮುಂಜಾನೆ ಮನೆಕೆಲಸದಾಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
 
ಸಂಸ್ಥೆಯೊಂದರಿಂದ 90 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಹೊತ್ತಿದ್ದ ಬನ್ಸಾಲ್ ಅವರನ್ನು ಸಿಬಿಐ ಕಳೆದ ಜುಲೈ 16 ರಂದು ಬಂಧಿಸಿತ್ತು. ಇದರಿಂದ ನೊಂದಿದ್ದ ಪತ್ನಿ ಸತ್ಯಬಾಲಾ ಹಾಗೂ ಪುತ್ರಿ ನೇಹಾ ತಂದೆ ಬನ್ಸಾಲ್ ಬಂಧನವಾದ ಎರಡು ದಿನಕ್ಕೆ ಆತ್ಮಹತ್ಯೆಗೆ ಶರಣಾಗಿದ್ದರು. ಈಗ ಪುತ್ರ ಮತ್ತು ಬನ್ಸಲ್ ಕೂಡ ಸಾವಿಗೆ ಶರಣಾಗಿರುವುದರಿಂದ ಸಂಪೂರ್ಣ ಕುಟುಂಬ ದುರಂತ ಅಂತ್ಯವನ್ನು ಕಂಡಂತಾಗಿದೆ. 
 
ಸಿಬಿಐ ದಾಳಿಯಿಂದ ಅವಮಾನವಾಗಿದೆ, ಜೀವಿಸಲು ಮನಸೊಪ್ಪುತ್ತಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ತಾಯಿ- ಮಗಳು ಸಾವಿಗೆ ಶರಣಾಗಿದ್ದರು. ಸಾವಿಗೆ ಯಾರನ್ನೂ ಹೊಣೆಯಾಗಿರಸಿರಲಿಲ್ಲ. ಆದರೆ ಬನ್ಸಾಲ್ ಮತ್ತು ಅವರ ಪುತ್ರ ಸಿಬಿಐ ಕಿರುಕುಳಕ್ಕೆ ಬೇಸತ್ತು ಸಾವಿಗೆ ಶರಣಾಗುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
 
ಬನ್ಸಾಲ್ ಆಗಸ್ಟ್ 26 ರಿಂದ ಜಾಮೀನಿನ ಮೇಲೆ ಹೊರಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ