ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ, ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಸಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಅವರು, ಈ ಸಮಯದಲ್ಲಿ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಕೈ ಬಲ ಪಡಿಸಬೇಕಿದೆ. ಕಾರ್ಯಕರ್ತರು ಹಗಲು ರಾತ್ರಿ ತಪಸ್ಸಿನ ಮೂಲಕ ದುಡಿಯುತ್ತಿದ್ದಾರೆ. ಅವರಿಗೆ ಅವಮಾನ ಆಗುವ ರೀತಿ ಯಾರು ನಡೆದುಕೊಳ್ಳಬಾರದು.
ನಾನು ರಾಜ್ಯದ ಅದ್ಯಕ್ಷ ಆಗಿದ್ದೇನೆ. ನಾಡು ಕಂಡ ರೈತನ ಮಗ ಮಾಜಿ ಸಿಎಂ ಯಡಿಯೂರಪ್ಪ ಮಗನೂ ಹೌದು. ಹಾಗಾಗಿ ಈ ಮಾತನ್ನು ನಾನು ಹೇಳ್ತಿಲ್ಲ. ಆದ್ರೆ, ಹೈ ಕಮಾಂಡ್ ಮುಂದೆ ಯಾವುದೇ ದೂರು ಕೊಟ್ಟಿಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ. ಅಷ್ಟೇ ವಿಶ್ವಾಸ ಅವರು ಕೊಡುತ್ತಾರೆ ಅಂತಾ ಭಾವಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.