11 ವರ್ಷದ ಸೀಸರ್ ಮುಂಬೈ ತಾಜ್ ಮೇಲೆ ನಡೆದ ಉಗ್ರ ದಾಳಿಯ ವಿರುದ್ಧ ನಡೆದ ಕಾರ್ಯಾಚರಣೆಯ ನಾಲ್ಕು ಹೀರೋ(ನಾಯಿ)ಗಳಲ್ಲಿ ಉಳಿದುಕೊಂಡಿದ್ದ ಏಕೈಕ ಸದಸ್ಯನಾಗಿದ್ದ. ಇತರ ಮೂವರಾದ ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಇದೇ ವರ್ಷ ಒಬ್ಬರಾದ ಮೇಲೆ ಒಬ್ಬರಂತೆ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದರು. ಜುಲೈ ಅಂತ್ಯದಲ್ಲಿ ಟೈಗರ್ ಸಾವಿನ ಬಳಿಕ ಖಿನ್ನನಾಗಿದ್ದ ಸೀಸರ್, ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಸೀಸರ್ ಇತ್ತೀಚಿಗೆ ಚೇತರಿಸಿಕೊಂಡಿದ್ದರಿಂದ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ನಿನ್ನೆ ತಡರಾತ್ರಿ ವಿಧಿವಶನಾಗಿದ್ದಾನೆ.