ನೋಟ್ ಬ್ಯಾನ್ ಬಳಿಕ ಸ್ವೈಪಿಂಗ್ ಮೆಶಿನ್ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳ

ಮಂಗಳವಾರ, 11 ಏಪ್ರಿಲ್ 2017 (09:37 IST)
ನೋಟ್ ಬ್ಯಾನ್ ಬಳಿಕ  ದೇಶಾದ್ಯಂತ ಕಾರ್ಡ್ ಪೇಮೆಂಟ್ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಗ್ರಾಹಕರು ಕಾರ್ಡ್ ಪೇಮೆಂಟ್`ಗೆ ಮುಂದಾಗುತ್ತಿರುವುದರಿಂದ ಶಾಪಿಂಗ್ ಮಳಿಗೆಗಳಲ್ಲಿ ಸ್ವೈಪಿಂಗ್ ಮೆಶೀನ್`ಗಳ ಭೇಡಿಕೆಯೂ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.
 

ನವೆಂಬರ್ 8ರಿಂದ ಫೆಬ್ರವರಿವರೆಗೆ 10 ಲಕ್ಷದಷ್ಟು ಸ್ವೈಪಿಂಗ್ ಮೆಶಿನ್ ಹೆಚ್ಚಾಗಿದೆ. 15 ಲಕ್ಷದಷ್ಟಿದ್ದ ಸ್ವೈಪಿಂಗ್ ಮೆಶಿನ್ ಸಂಖ್ಯೆ 25 ಲಕ್ಷಕ್ಕೆ ಏರಿಕೆಯಾಗಿದೆ. ಹೀಗಾಗಿ, ದೇಶಾದ್ಯಂತ ವ್ಯವಹಾರಕ್ಕೆ ಬೇಕಾದ ನಗದು ಬೇಡಿಕೆ 1 ಲಕ್ಷ ಕೋಟಿಯಷ್ಟು ಕಡಿಮೆಯಾಗಿದೆ ಎನ್ನುತ್ತೆ ಅಂಕಿ ಅಂಶ.

ಅಕ್ಟೋಬರ್ 2016ರ ಹೊತ್ತಿಗೆ 15.1 ಲಕ್ಷದಷ್ಟಿದ್ದ ಕಾರ್ಡ್ ಪೇಮೆಂಟ್ ಸ್ವೈಪಿಂಗ್ ಮೆಶಿನ್ ಸಂಖ್ಯೆ ಫೆಬ್ರವರಿ ಹೊತ್ತಿಗೆ 22.2 ಲಕ್ಷಕ್ಕೆ ಏರಿಕೆಯಾಗಿತ್ತು. ಈಗ 25 ಲಕ್ಷ ದಾಟಿದೆ ಎನ್ನುತ್ತೆ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ನಿಡಿರುವ ಅಂಕಿ ಅಂಶ. ಇದರಲ್ಲಿ ಶೇ.50ರಷ್ಟು ಮೆಶಿನ್`ಗಳು ಎಸ್`ಬಿಐ, ಆಕ್ಸಿಸ್, ಎಚ್`ಡಿಎಫ್`ಸಿ, ಕಾರ್ಪೊರೇಶನ್ ಮತ್ತು ಐಸಿಐಸಿಐ ಬ್ಯಾಂಕ್`ಗಳಿಂದ ಬಂದಿವೆ.

ಎಸ್`ಬಿಐ 1.24 ಲಕ್ಷ, ಎಚ್ಡಿಎಫ್`ಸಿ ಮತ್ತು ಆಕ್ಸಿಸ್ ತಲಾ 1.18 ಲಕ್ಷ, ಕಾರ್ಪೊರೇಶನ್ ಬ್ಯಾಂಕ್ 80 ಸಾವಿರ, ಐಸಿಐಸಿಐ ಬ್ಯಾಂಕ್ 67 ಸಾವಿರದಷ್ಟು ಸ್ವೈಪಿಂಗ್ ಮೆಶಿನ್ ನೀಡಿವೆ.

ವೆಬ್ದುನಿಯಾವನ್ನು ಓದಿ