ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ: ಕೇಂದ್ರದಿಂದ ಗುಡ್ ನ್ಯೂಸ್, ಯಾವಾಗಿನಿಂದ ಜಾರಿ ಇಲ್ಲಿದೆ ವಿವರ

Krishnaveni K

ಶುಕ್ರವಾರ, 27 ಸೆಪ್ಟಂಬರ್ 2024 (10:40 IST)
ನವದೆಹಲಿ: ಕೇಂದ್ರ ಸರ್ಕಾರ ಕಾರ್ಮಿಕರ ಕನಿಷ್ಠ ವೇತನ ದರ ಹೆಚ್ಚಳ ಮಾಡಿದ್ದು ದುಡಿಯುವ ವರ್ಗದವರಿಗೆ ದಸರಾ ಹಬ್ಬದ ಸಂದರ್ಭದಲ್ಲಿ ಗುಡ್ ನ್ಯೂಸ್ ನೀಡಿದೆ. ಹೆಚ್ಚಿನ ವಿವರಗಳಿಗೆ ಮುಂದೆ ಓದಿ.

ಕೇಂದ್ರ ಸರ್ಕಾರವು ಕಾರ್ಮಿಕರ ವೇರಿಯೇಬಲ್ ಡಿಯರ್ನೆಸ್ ಅಲೋವೆನ್ಸ್ (ವಿಡಿಎ) ಪರಿಷ್ಕರಣೆ ಮೂಲಕ ಕನಿಷ್ಠ ವೇತನ ದರ ಹೆಚ್ಚಳ ಮಾಡಿದೆ. ಈ ನಿಯಮ ಇದೇ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಈ ಯೋಜನೆಯಿಂದ ವಿಶೇಷವಾಗಿ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಕಟ್ಟಡ ಕಾರ್ಮಿಕರು, ಲೋಡಿಂಗ್, ಅನ್ ಲೋಡಿಂಗ್ ಕಾರ್ಮಿಕರು, ವಾಚ್ ಗಾರ್ಡ್ ಗಳು ಮುಂತಾದ ವಲಯದಲ್ಲಿರುವ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ. ಕಾರ್ಮಿಕರ ಕೌಶಲ್ಯಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನವನ್ನು ನಿಗದಿ ಮಾಡಲಾಗುತ್ತದೆ. ಕೌಶಲ್ಯ, ಕೌಶಲ್ಯ ರಹಿತ, ಅರೆ ಕೌಶಲ್ಯ ರಹಿತ ಕಾರ್ಮಿಕರನ್ನು ಎ,ಬಿ, ಮತ್ತು ಸಿ ವರ್ಗದವರನ್ನಾಗಿ ವಿಂಗಡಣೆ ಮಾಡಲಾಗಿದೆ.

ಎ ವರ್ಗದವರಲ್ಲಿರುವವರಿಗೆ ದಿನಕ್ಕೆ 783 ರೂ. ಗಳಂತೆ ಮಾಸಿಕ 20,358 ರೂ., ಅರೆ ಕುಶಲಗಾರರು 868 ರೂ. ನಂತೆ ಮಾಸಿಕ 22,568 ರೂ. ಮತ್ತು ಕ್ಲರಿಕಲ್ ಹುದ್ದೆಯಲ್ಲಿರುವವರು ದಿನಕ್ಕೆ 954 ರೂ.ಗಳಂತೆ 24,804 ರೂ. ಗಳಷ್ಟು ಕನಿಷ್ಠ  ವೇತನ ಪಡೆಯಲಿದ್ದಾರೆ. ನುರಿತ ಕೆಲಸಗಾರರಿಗೆ ಇದಕ್ಕಿಂತ ಹೆಚ್ಚಿನ ವೇತನ ಸಿಗುವುದು. ಮಾಹಿತಿಗಾಗಿ https://clc.gov.in/clc/ ಎಂಬ ವೆಬ್ ಸೈಟ್ ಕ್ಲಿಕ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ