ನವದೆಹಲಿ : ಲಡಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮೇಲೆ ಚೀನಾ ಯೋಧರು ದಾಳಿ ನಡೆಸಿದ ಹಿನ್ನಲೆಯಲ್ಲಿ 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಬಿಎಸ್ ಎನ್ ಎಲ್ ಗೆ ಸೂಚನೆ ನೀಡಿದೆ ಎಂಬುದಾಗಿ ತಿಳಿದುಬಂದಿದೆ.
ಟೆಲಿಕಾಂ ಕಂಪೆನಿಗಳಾದ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕಮಪೆನಿಗಳು ಚೀನಾ ಮೂಲದ ಹುವಾವೇ ಕಂಪೆನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್ ಎನ್ ಎಲ್ ನೊಂದಿಗೆ ಝಡ್ ಟಿಇ ಕಾರ್ಯ ನಿರ್ವಹಿಸುತ್ತಿದೆ. ಆದಕಾರಣ ಈ ಖಾಸಗಿ ಕಂಪೆನಿಗಳಿಗೂ ಕೂಡ ಚೀನಾದ ಸಂಸ್ಥೆಯಿಂದ ತಯಾರಾಗುವ ಸಲಕರಣೆಗಳ ಮೇಲೆ ಅವಲಂಬನೆ ಆಗದಂತೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.