ಯೋಧನ ಆತ್ಮಹತ್ಯೆ: ಕೇಂದ್ರ ಸರಕಾರವನ್ನು ಗೂಂಡಾಗಳು ನಡೆಸುತ್ತಿದ್ದಾರೆ: ಕೇಜ್ರಿವಾಲ್

ಬುಧವಾರ, 2 ನವೆಂಬರ್ 2016 (15:58 IST)
ಒನ್ ರ್ಯಾಂಕ್ ಒನ್ ಪೆನ್ಶನ್ ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ ರಾಮ್ ಕಿಶನ್ ಗರೇವಾಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಆರ್‌ಎಂಎಲ್ ಆಸ್ಪತ್ರೆಗೆ ಆಗಮಿಸಿದ್ದ ರಾಜಕೀಯ ನಾಯಕರನ್ನು ಯಾಕೆ ಅಡ್ಡಿಪಡಿಸಲಾಗುತ್ತಿದೆ. ಕೇಂದ್ರ ಸರಕಾರವನ್ನು ಗೂಂಡಾಗಳು ನಡೆಸುತ್ತಿದ್ದಾರೆಯೇ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
 
ಕೇಂದ್ರ ಸರಕಾರದ ವರ್ತನೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೇಜ್ರಿವಾಲ್, ಮೃತ ಯೋಧನ ಕುಟುಂಬದವರನ್ನು ಭೇಟಿಯಾಗಲು ಬಂದ ರಾಜಕೀಯ ನಾಯಕರನ್ನು ಯಾಕೆ ತಡೆಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನವದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. 
 
ಮೃತ ಯೋಧನ ಕುಟುಂಬದವರ ಯೋಗಕ್ಷೇಮ ವಿಚಾರಿಸುವುದು ತಪ್ಪೆ. ಪೊಲೀಸರ ಇಂತಹ ವರ್ತನೆ ನೋಡಿದಲ್ಲಿ ಕೇಂದ್ರ ಸರಕಾರವನ್ನು ಗೂಂಡಾಗಳು ನಡೆಸುತ್ತಿದ್ದಾರೆ ಎನ್ನುವ ಬಾವನೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ