ಇ -ವಾಹನ ನೋಂದಣಿ ಶುಲ್ಕ ರದ್ದುಪಡಿಸಲು ಮುಂದಾದ ಕೇಂದ್ರ ಸರ್ಕಾರ. ಕಾರಣವೇನು ಗೊತ್ತಾ?
ಗುರುವಾರ, 6 ಜೂನ್ 2019 (11:49 IST)
ನವದೆಹಲಿ : ಪರಿಸರ ಸ್ನೇಹಿ ವಾಹನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ಕ್ರಮವೊಂದನ್ನು ಕೈಗೊಂಡಿದೆ.
ಹೌದು. ವಿದ್ಯುತ್ ಚಾಲಿತ (ಇ -ವೆಹಿಕಲ್) ವಾಹನಗಳು ವಾಯುಮಾಲಿನ್ಯವನ್ನು ಉಂಟು ಮಾಡದ ಕಾರಣ ಅದನ್ನು ಜನರು ಹೆಚ್ಚೆಚ್ಚು ಬಳಕೆ ಮಾಡಲಿ ಎಂಬ ಕಾರಣಕ್ಕೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಇ -ವಾಹನ ನೋಂದಣಿ ಶುಲ್ಕ ರದ್ದುಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ವತಿಯಿಂದ ಶೀಘ್ರವೇ ಕರಡು ಅಧಿಸೂಚನೆ ಹೊರಡಿಸಲಿದ್ದು, ಈ ಪ್ರಸ್ತಾವನೆಗೆ ಸಾರ್ವಜನಿಕರಿಂದ ಪ್ರತಿಕ್ರಿಯೆ ಕೇಳಲಾಗುವುದು ಎನ್ನಲಾಗಿದೆ.