ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ರಸ್ತೆ ಸಾರಿಗೆ ಇಲಾಖೆ
ಬುಧವಾರ, 31 ಅಕ್ಟೋಬರ್ 2018 (14:47 IST)
ನವದೆಹಲಿ : ಪ್ರಯಾಣಿಕರ ಸುರಕ್ಷತೆಗಾಗಿ ಅದರಲ್ಲೂ ಮಹಿಳೆಯರ ರಕ್ಷಣೆಗಾಗಿ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೊಳಿಸಲಿದೆ.
ಅದೇನೆಂದರೆ ಜನವರಿ 1ರಿಂದ ದೇಶಾದ್ಯಂತ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಲಿದೆ. ಹೀಗಾಗಿ 2019 ರ ಜನವರಿ 1 ಅಥವಾ ನಂತರ ನೋಂದಾಯಿಸುವ ಆಟೋ ರಿಕ್ಷಾ, ಇ ರಿಕ್ಷಾ ಹೊರತುಪಡಿಸಿ ಉಳಿದ ಸಾರಿಗೆ ವಾಹನಗಳು ಲೊಕೇಶನ್ ಟ್ರಾಕ್ ಮಾಡಬಹುದಾದ ಸಾಧನ (ವಿಎಲ್ಟಿ) ಅಳವಡಿಸುಕೊಳ್ಳುವುದು ಅಗತ್ಯವಾಗಿದೆ.
ಇದು ಎಲ್ಲಾ ಹೊಸ ವಾಣಿಜ್ಯ ಮತ್ತು ಹಳೆಯ ವಾಹನಗಳಿಗೆ ಅನ್ವಯಿಸಲಿದೆ. ಮುಂದೆ ರಾಜ್ಯ ಸರ್ಕಾರ ಅನುಷ್ಠಾನ ಮಾಡಬೇಕಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 2018ರ ಡಿಸೆಂಬರ್ ವರೆಗೆ ನೋಂದಣಿಯಾದ ಸಾರ್ವಜನಿಕ ವಾಹನಗಳಿಗೆ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೇ ಎಲ್ಲಾ ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತು ವಾಹನ ಟ್ರಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.