ತ್ರಿವಳಿ ತಲಾಖ್ ಗೆ ಕೇಂದ್ರ ಕಾನೂನು ರಚಿಸಲ್ಲ

ಬುಧವಾರ, 23 ಆಗಸ್ಟ್ 2017 (09:18 IST)
ನವದೆಹಲಿ: ತ್ರಿವಳಿ ತಲಾಖ್ ಪದ್ಧತಿ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇದರ ಬದಲಾಗಿ ಹೊಸ ಕಾನೂನು ರಚಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು.

 
ಆದರೆ ಕೇಂದ್ರ ಸರ್ಕಾರ ಇದರ ಬದಲಾಗಿ ಹೊಸ ಕಾನೂನು ರೂಪಿಸಲ್ಲ ಎಂದಿದೆ. ಅದರ ಬದಲಾಗಿ 1937 ರ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಕೇಂದ್ರ ಹೇಳಿದೆ.

ಈಗಾಗಲೇ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದಿರುವ ಕಾರಣ ಹೊಸ ಕಾನೂನು ರೂಪಿಸದೇ ಇರಲು ಕೇಂದ್ರ ನಿರ್ಧರಿಸಿದೆ. ಅದರ ಈಗಿರುವ ಕಾನೂನಿಗೇ ತಿದ್ದುಪಡಿ ತರಲಿದೆ.

ಇದನ್ನೂ ಓದಿ.. ಕನ್ನಡಿಗ ರೋಹನ್ ಬೋಪಣ್ಣಗೆ ಈ ಅನ್ಯಾಯ ಸರೀನಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ