ನವದೆಹಲಿ: ಆನ್ ಲೈನ್ ಮಾಧ್ಯಮಗಳು, ಅಮೆಝೋನ್, ನೆಟ್ ಫ್ಲಿಕ್ಸ್ ಮುಂತಾದ ಆನ್ ಲೈನ್ ಆಪ್ ಗಳ ಮೇಲೆ ಇನ್ನು ಕೇಂದ್ರ ನಿಗಾ ವಹಿಸಲಿದೆ.
ಇದುವರೆಗೆ ಇವು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯಿಂದ ಹೊರತಾಗಿತ್ತು. ಇದೀಗ ಇಂತಹ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ಬೇಕಾಬಿಟ್ಟಿ ಸುದ್ದಿ ಹರಡುತ್ತಿರುವ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಅವುಗಳ ಮೇಲೆ ನಿಯಂತ್ರಣ ಹೇರಲು ಕೇಂದ್ರ ನಿರ್ಧರಿಸಿದೆ. ಕೇವಲ ಮಾಧ್ಯಮಗಳು, ಆಪ್ ಗಳು ಮಾತ್ರವಲ್ಲ, ಫೇಸ್ ಬುಕ್, ಇನ್ ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳ ಮೇಲೂ ಕೇಂದ್ರ ಕಣ್ಣಿಡಲಿದೆ.