ಮನೆಗೆ ಬಂದ ಅತ್ತೆಗೆ ಮನಸೋ ಇಚ್ಛೆ ಗೂಸಾ ಕೊಟ್ಟ ಅಳಿಯ

ಸೋಮವಾರ, 9 ನವೆಂಬರ್ 2020 (10:31 IST)
ನಾಗ್ಪುರ: ಅತ್ತೆ ಮನೆಗೆ ಬಂದು ಝಾಂಡಾ ಹೂಡಿದ್ದಕ್ಕೆ ಕೋಪಗೊಂಡ ಅಳಿಯ ಆಕೆಗೆ ಕ್ರಿಕೆಟ್ ಬ್ಯಾಟ್ ನಿಂದ ಮನಸೋ ಇಚ್ಛೆ ಥಳಿಸಿದ ಘಟನೆ ನಾಗ್ಪುರದಲ್ಲಿ ನಡೆದಿದೆ.


52 ವರ್ಷದ ಆರೋಪಿ ತನ್ನ 73 ವರ್ಷದ ಅತ್ತೆಯ ಮೇಲೆ ಇಂತಹ ಕ್ರೂರತನ ಮೆರೆದಿದ್ದಾನೆ. ತಡೆಯಲು ಬಂದ ಪತ್ನಿಗೂ ಥಳಿಸಿದ್ದಾನೆ. ಘಟನೆಯಲ್ಲಿ ಇಬ್ಬರೂ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ