ಜಿ20 ಔತಣಕೂಟಕ್ಕೆ ಸಿರಿಧಾನ್ಯಗಳ ವೈವಿಧ್ಯತೆ : ಮೆನುವಿನಲ್ಲಿ ಏನೇನಿತ್ತು?

ಭಾನುವಾರ, 10 ಸೆಪ್ಟಂಬರ್ 2023 (11:11 IST)
ನವದೆಹಲಿ : ಜಿ20 ಶೃಂಗಸಭೆಯ ಮೊದಲ ದಿನ ಅಂತ್ಯಗೊಂಡಿದೆ. ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರು ಹಾಗೂ ಪ್ರತಿನಿಧಿಗಳಿಗೆ ಔತಣಕೂಟವನ್ನು ಆಯೋಜಿಸಿದ್ದು, ಭಾರತದ ವೈವಿಧ್ಯಮಯ ಭಕ್ಷ್ಯಗಳನ್ನು ನೀಡಲಾಗಿದೆ.
 
ರಾಷ್ಟ್ರದ ಹಾಗೂ ವಿಶ್ವದ ನಾಯಕರಿಗೆ ದೇಶದ ವಿಶಿಷ್ಟ ಭೋಜನದ ಅನುಭವವನ್ನು ನೀಡಲಾಗಿದೆ. ಬೆಳ್ಳಿ, ಚಿನ್ನ ಲೇಪಿತ ಪಾತ್ರೆಗಳಲ್ಲಿ ಊಟವನ್ನು ಬಡಿಸಿ, ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ನೋಟವನ್ನು ಪ್ರದರ್ಶಿಸಲಾಗಿದೆ.

ಸಂಪ್ರದಾಯಗಳು, ಪದ್ಧತಿಗಳು ಹಾಗೂ ಹವಾಮಾನದ ಸಂಯೋಜನೆಯೊಂದಿಗೆ ಭಾರತ ಹಲವು ವಿಧಗಳಲ್ಲಿ ವೈವಿಧ್ಯಮಯವಾಗಿದೆ. ಈ ಎಲ್ಲಾ ರುಚಿ ನಮ್ಮನ್ನು ಸಂಪರ್ಕಿಸುತ್ತದೆ ಎಂದು ಬರೆಯಲಾಗಿದೆ.

ಮೆನುವಿನಲ್ಲಿ ಸಿರಿಧಾನ್ಯಗಳ ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವುಗಳ ಪೌಷ್ಟಿಕಾಂಶ ಮಾತ್ರವಲ್ಲದೇ ಕೃಷಿ ಕ್ಷೇತ್ರಕ್ಕೆ ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ವಿವರಿಸಲಾಗಿದೆ.

ವಿಶೇಷ ಖಾದ್ಯಗಳೇನು?

ಮುಖ್ಯ ಅಡುಗೆ
ವನವರ್ಣಂ: ಮಶ್ರೂಮ್ನೊಂದಿಗೆ ಟಾಪಿಂಗ್ ಮಾಡಲಾದ ಹಲಸು ಹಣ್ಣಿನ ಗ್ಯಾಲೆಟ್, ಕುರುಕಲು ಅನುಭವ ನೀಡುವ ಸಣ್ಣ ರಾಗಿ ಮತ್ತು ಕರಿಬೇವಿನ ಎಲೆಯೊಂದಿಗೆ ಫ್ರೈ ಮಾಡಲಾದ ಕೇರಳದ ಕೆಂಪು ಅನ್ನ. 

ಭಾರತೀಯ ಬ್ರೆಡ್ಗಳು
ಮುಂಬೈ ಪಾವ್: ಈರುಳ್ಳಿ ಬೀಜದ ಸುವಾಸನೆಯ ಮೃದುವಾದ ಬನ್.
ಬಕರಖಾನಿ: ಏಲಕ್ಕಿ ಸುವಾಸನೆಯ ಸಿಹಿ ರೋಟಿ.

ಸಿಹಿತಿಂಡಿ
ಮಧುರಿಮಾ ಪಾಟ್ ಆಫ್ ಗೋಲ್ಡ್: ಏಲಕ್ಕಿ ಸುವಾಸನೆಯ ಬಾರ್ನ್ಯಾರ್ಡ್ ಧಾನ್ಯದ ಪುಡಿಂಗ್, ಅಂಬೆಮೊಹರ್ ಅನ್ನ, ಅಂಜೂರ-ಪೀಚ್ ಮಿಶ್ರಣದ ಕಾಂಪೋಟ್.

ಪಾನೀಯಗಳು
ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಚಹಾ.
ಚಾಕ್ಲೇಟ್ ಫ್ಲೇವರ್ನ ಪಾನ್ ಎಲೆಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ