ಜಿ20 ಶೃಂಗಸಭೆಯಲ್ಲಿ ಯುಪಿಐ ಶಕ್ತಿ ಪ್ರದರ್ಶನ

ಗುರುವಾರ, 7 ಸೆಪ್ಟಂಬರ್ 2023 (13:11 IST)
ನವದೆಹಲಿ : ಜಿ20 ಶೃಂಗಸಭೆಯಲ್ಲಿ ಭಾರತ ತನ್ನ ಡಿಜಿಟಲ್ ಸಾಮಥ್ರ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಸಜ್ಜಾಗಿದೆ. ಸುಮಾರು 1,000 ವಿದೇಶಿ ಪ್ರತಿನಿಧಿಗಳಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ತಂತ್ರಜ್ಞಾನದ ಅನುಭವ ನೀಡಲು ತಯಾರಿ ಮಾಡಿಕೊಂಡಿದೆ.

ಯುಪಿಐ ವಹಿವಾಟುಗಳನ್ನು ಮಾಡಲು ಬಯಸುವ ವಿದೇಶಿ ಪ್ರತಿನಿಧಿಗಳಿಗೆ ಅವರ ಯುಪಿಐ ವ್ಯಾಲೆಟ್ಗಳಲ್ಲಿ 500-1,000 ರೂ. ನೀಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

UPI ಭಾರತದಲ್ಲಿ ಮೊಬೈಲ್ ಆಧಾರಿತ ತ್ವರಿತ ಪಾವತಿ ವ್ಯವಸ್ಥೆಯಾಗಿದ್ದು, ಗ್ರಾಹಕರು ವರ್ಚುವಲ್ ಪಾವತಿ ವಿಳಾಸವನ್ನು ಬಳಸಿಕೊಂಡು 24/7 ಪಾವತಿಗಳನ್ನು ಮಾಡಲು ಅನುಮತಿಸುತ್ತದೆ. ಭಾರತದ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಜಾಗತೀಕರಿಸುವಲ್ಲಿ ಭಾರತ ಸರ್ಕಾರ ಮತ್ತು ಆರ್ಬಿಐ ಪ್ರಮುಖ ಪಾತ್ರವಹಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ