ಚಮೋಲಿ ದುರಂತ: 36 ಮೃತದೇಹಗಳ ಪತ್ತೆ, ಇನ್ನೂ ಮುಂದುವರಿದ ಶೋಧ

ಬುಧವಾರ, 10 ಫೆಬ್ರವರಿ 2021 (09:56 IST)
ಚಮೋಲಿ: ಭಾನುವಾರ ಸಂಭವಿಸಿದ ನೀರ್ಗಲ್ಲು ಸ್ಪೋಟಕ್ಕೆ ಸಿಲುಕಿದವರ ಶೋಧ ಕಾರ್ಯ ಮುಂದವರಿದಿದ್ದು, ಇದುವರೆಗೆ ರಕ್ಷಣಾ ಪಡೆಗಳು 36 ಮೃತದೇಹಗಳನ್ನು ಪತ್ತೆ ಮಾಡಿವೆ. ಇನ್ನೂ ಶೋಧ ಕಾರ್ಯ ಮುಂದುವರಿದಿದೆ.


ಇನ್ನೂ 206 ಮಂದಿ ನಾಪತ್ತೆಯಾಗಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಈ ಪೈಕಿ ತಪೋವನ್ ಸುರಂಗದಲ್ಲಿ 25-35 ಮಂದಿ ಸಿಲುಕಿದವರೂ ಸೇರಿದ್ದಾರೆ. ಇವರ ಪತ್ತೆಗಾಗಿ ಹಗಲು ರಾತ್ರಿಯೆನ್ನದೇ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಮಾರು 600 ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ