ಚೆನ್ನೈ :ತಮಿಳುನಾಡಿನ ಕೊಡಂಬಾಕಂನಲ್ಲಿ ಬೀದಿ ಬದಿ ಮಲಗಿದ್ದ ವ್ಯಕ್ತಿಯ ಗುಪ್ತಾಂಗಕ್ಕೆ ಮದ್ಯಪಾನ ಮಾಡಿದ್ದ ಕಿಡಿಗೇಡಿ ಯುವಕರು ಬೆಂಕಿ ಹಚ್ಚಿ ವಿಕೃತ ಮೆರೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಘಟನೆ ಜೂನ್ 4 ರ ರಾತ್ರಿ ನಡೆದಿದ್ದು, ಕಿಡಿಗೇಡಿಗಳ ದುಷ್ಕೃತ್ಯದ ವಿಡಿಯೋ ಈಗ ವೈರಲ್ ಆಗಿದೆ.
50 ವರ್ಷದ ಜಾಫರ್ ಎಂಬ ವ್ಯಕ್ತಿ ಬೀದಿ ಬದಿ ಮದ್ಯಪಾನ ಮಲಗಿದ್ದು, ಈ ವೇಳೆ ಕುಡಿದು ಬಂದ ಯುವಕರ ಗುಂಪು ವೃದ್ಧ ವ್ಯಕ್ತಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿದ್ದಾರೆ. ಮಾತ್ರವಲ್ಲದೆ ಪೈಪ್ ನಿಂದ ಜಾಫರ್ಗೆ ಹೊಡೆದಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಜಾಫರ್ ಬೆಂಕಿಯನ್ನು ನಂದಿಸಲು ಪರದಾಡಿದ್ದಾನೆ.