ತಿಹಾರ್ ಜೈಲಿನಲ್ಲಿರುವ ಚೋಟಾ ರಾಜನ್‌ಗೆ ಚೋಟಾ ಶಕೀಲ್‌ನಿಂದ ಜೀವಬೆದರಿಕೆ

ಭಾನುವಾರ, 1 ಮೇ 2016 (16:22 IST)
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇಂಡೋನೇಶಿಯಾದಲ್ಲಿ ಬಂಧಿಸಲ್ಪಟ್ಟು ತಿಹಾರ್ ಜೈಲಿನಲ್ಲಿ  ಬಿಗಿ ಭದ್ರತೆಯ ನಡುವಿದ್ದರೂ ಭೂಗತ ಪಾತಕಿ ಚೋಟಾ ರಾಜನ್‌‌ಗೆ ಜೀವ ಬೆದರಿಕೆ ಮುಂದುವರೆದಿದೆ.
 
ಮತ್ತೊಬ್ಬ ಭೂಗತ ಪಾತಕಿ, ದಾವೂದ್ ಇಬ್ರಾಹಿಂ ಬಲಗೈ ಬಂಟ ಚೋಟ ಶಕೀಲ್ ಮತ್ತೆ ರಾಜನ್‌ಗೆ ಜೀವ ಬೆದರಿಕೆ ಹಾಕಿರುವ ಬಹಳ ತಡವಾಗಿ ಬೆಳಕಿಗೆ ಬಂದಿದೆ. 
 
ಚೋಟಾ ಶಕೀಲ್ ತನ್ನ ಮೊಬೈಲ್ ನಂಬರ್‌ನಿಂದ ತಿಹಾರ್ ಜೈಲಿನ ಹಿರಿಯ ಅಧಿಕಾರಿ ಸುನೀಲ್ ಗುಪ್ತಾ ಅವರಿಗೆ ಸಂದೇಶ ಕಳುಹಿಸಿದ್ದು, ಆದಷ್ಟು ಬೇಗ ರಾಜನ್‌ನನ್ನು ಮುಗಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ಹಿನ್ನೆಲೆಯಲ್ಲಿ ಬಂಧಿತ ಪಾತಕಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ. 
 
ಎಷ್ಟು ದಿನಗಳ ಕಾಲ ಸತ್ತ ಹಂದಿಯನ್ನು ಸಾಯದಂತೆ ರಕ್ಷಿಸುತ್ತಿರಿ. ಆದಷ್ಟು ಬೇಗ ನಾನವನಿಗೆ ಅಂತ್ಯ ಮಾಡುತ್ತೇನೆ ಎಂದು ಶಕೀಲ್ ಸಂದೇಶ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 24 ರಂದು ಈ ಸಂದೇಶ ಬಂದಿತ್ತು ಎಂದು ತಿಳಿದು ಬಂದಿದೆ
 
27 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಚೋಟಾ ರಾಜನ್ ಕಳೆದ ವರ್ಷ ಅಕ್ಟೋಬರ್ 25 ರಂದು ಬಾಲಿಯಲ್ಲಿ ಬಂಧಿಸಲ್ಪಟ್ಟಿದ್ದ. ನವೆಂಬರ್ 6 ರಂದು ಅವರನ್ನು ಭಾರತಕ್ಕೆ ತರಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ