ಸಹಜೀವನದಿಂದ ಹುಟ್ಟಿದ ಮಗುವಿಗೆ ತಂದೆಯ ಆಸ್ತಿಯ ಮೇಲೆ ಹಕ್ಕು ಇರುತ್ತದೆಯೇ?

ಬುಧವಾರ, 15 ಜೂನ್ 2022 (09:20 IST)
ನವದೆಹಲಿ: ಸಹಜೀವನದಿಂದ ಹುಟ್ಟಿದ ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಇರುತ್ತದೆಯೇ? ಈ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಒಬ್ಬ ಮಹಿಳೆ ಮತ್ತು ಪುರುಷರು ಬಹುಕಾಲದಿಂದ ಜೊತೆಯಾಗಿ ಜೀವಿಸಿ, ಅವರಿಗೆ ಮಕ್ಕಳಾಗಿದ್ದರೆ ಆ ಮಕ್ಕಳಿಗೆ ವಂಶಪಾರಂಪರ್ಯವಾಗಿ ಬರಬೇಕಾದ ಆಸ್ತಿಯಲ್ಲಿ ಪಾಲಿರುತ್ತದೆ. ಅದು ಅವರ ಹಕ್ಕು ಆಗಿರುತ್ತದೆ. ಇದನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ