18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸುವಂತಿಲ್ಲ!

ಗುರುವಾರ, 17 ನವೆಂಬರ್ 2022 (13:56 IST)
ಮುಂಬೈ : 18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸದಂತೆ ಬಂಸಿ ಗ್ರಾಮದಲ್ಲಿ ನಿಷೇಧಿಸಲಾಗಿದೆ.
 
ಮಕ್ಕಳು ಗೇಮಿಂಗ್ ಮತ್ತು ಮೊಬೈಲ್ ಗೀಳಿಗೀಡಾಗುವುದನ್ನು ತಪ್ಪಿಸಲು ಗ್ರಾಮದ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದಲ್ಲಿರುವ ಯವತ್ಮಾಲ್ ಜಿಲ್ಲೆಯಲ್ಲಿ ಬಂಸಿಯಲ್ಲಿರುವ ಈ ಗ್ರಾಮ ತನ್ನ ನಿರ್ಧಾರದಿಂದ ಈ ದೇಶದ್ಯಾಂತ ಸುದ್ದಿಯಲ್ಲಿದೆ.

ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಮಕ್ಕಳು ಗೇಮಿಂಗ್ ಚಟಕ್ಕೆ ಬೀಳಬಹುದು, ದುಶ್ಚಟಗಳಿಗೆ ಬಲಿಯಾಗಬಹುದು ಮತ್ತು ಪೊರ್ನ್ ವೆಬ್ಸೈಟ್ಗಳಿಗೆ ದಾಸರಾಗಬಹುದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಗ್ರಾಮದ ಮುಖಂಡ ಗಜಾನನ ತಾಳೆ ಎಲ್ಲ ಪೋಷಕರು ಈ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.  18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ಫೋನ್ಗಳನ್ನು ನಿಷೇಧಿಸುವ ಔಪಚಾರಿಕ ನಿರ್ಣಯವನ್ನು ಗ್ರಾಮಸ್ಥರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಗಜಾನನ ತಾಳೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ