ಯುದ್ಧ ವಿಮಾನ ಹಾರಿಸಿ ಭಾರತವನ್ನು ಕೆಣಕಿದ ಚೀನಾ!
ಭಾರತವನ್ನು ಪ್ರಚೋದಿಸಲು ಚೀನಾ ವಾಯುಸೇನೆ ಪ್ರಯತ್ನ ನಡೆಸುತ್ತಿದ್ದು ಎಲ್ಎಸಿ(ವಾಸ್ತವ ಗಡಿ ನಿಯಂತ್ರಣ ರೇಖೆ) ಬಳಿ ಯುದ್ಧ ವಿಮಾನಗಳನ್ನು ಹಾರಿಸಲಾಗುತ್ತಿದೆ.
ಚೀನಾದ ವಾಯುಪಡೆಯ ಯುದ್ಧ ವಿಮಾನಗಳು ಪೂರ್ವ ಲಡಾಖ್ ಸೆಕ್ಟರ್ನಲ್ಲಿ ಎಲ್ಎಸಿ ತುಂಬಾ ಹತ್ತಿರದಲ್ಲಿ ಹಾರುತ್ತಿವೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಚೀನಾದ ಚಟುವಟಿಕೆಗಳನ್ನು ಭಾರತೀಯ ವಾಯು ಸೇನೆ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಚೀನಾದ ಯುದ್ಧ ವಿಮಾನಗಳ ಸಂಭವನೀಯ ಬೆದರಿಕೆಯನ್ನು ನಿಭಾಯಿಸಲು ಸುಧಾರಿತ ನೆಲೆಗಳಲ್ಲಿ ಅನೇಕ ಯುದ್ಧ ವಿಮಾನಗಳನ್ನು ಸಿದ್ದವಾಗಿರಿಸಿದೆ ಎಂದು ಹಿರಿಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.