ಸಂಘಟನೆಗಳು, ಸ್ಥಳೀಯರಿಂದ ಶಾಸಕ ಜಮೀರ್ ವಿರುದ್ಧ ಕೆಂಡಮಂಡಲ..!

ಭಾನುವಾರ, 3 ಜುಲೈ 2022 (20:19 IST)
ಈದ್ಘಾ ಆಟದ ಮೈದಾನ ಉಳಿವಿಗಾಗಿ ಚಾಮರಾಜಪೇಟೆ ನಾಗರೀಕರ ಒಕ್ಕೂಟ ಹಾಗೂ ೫೦ಕ್ಕೂ ಹೆಚ್ಚು ಸಂಘಟನೆಗಳು ಸೇರಿ ಬಂದ್ ಗೆ ಕರೆಯನ್ನ ನೀಡಲಾಗಿದೆ.  ಬೆಳಗ್ಗೆ ೧೦ ಘಂಟೆ ಸುಮಾರಿಗೆ ಸಿರ್ಸಿ ಸರ್ಕಲ್ ನಿಂದ ಈದ್ಘಾ ಮೈದಾನದ ವರೆಗೆ ಬೃಹತ್ ರ್ಯಾಲಿ ಮಾಡಲು ನಿರ್ಧಿಸಲಾಗಿದೆ. ಕ್ಷೇತ್ರದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ, ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಪತ್ರ ನೀಡಲಿದ್ದಾರೆ.  ಇನ್ನೂ ಇವತ್ತು ಸಂಜೆಯಿಂದ ಮನೆ ಮನೆಗೆ ತೆರಳಿ ಬಿತ್ತಿಪತ್ರವನ್ನ ನೀಡಿ, ಬಂದ್ ನಲ್ಲಿ ಭಾಗಿಯಾಗುವಂತೆ ಕರೆ ನೀಡ್ತಿದ್ದಾರೆ.ಚಾಮರಾಜಪೇಟೆಯ ಜಂಗಮ‌ ಮಂಟಪದಲ್ಲಿ ನಡೆದ ಸಭೆಯಲ್ಲಿ , ಜಯಕರ್ನಾಟಕ ಸಂಘಟನೆ ಬಂದ್ ಗೆ ಕರೆ ನೀಡ್ತು. ಇದಕ್ಕೆ ಉಳಿದ ಸಂಘಟನೆಗಳು ಕೂಡ ಅಸ್ತು ಎಂದ್ವು. ಬಂದ್ ದಿನ ಜನ ಸ್ವಯಂ ಪ್ರೇರಿತವಾಗಿ ಬರ್ತಾರೆ. ಒಂದೊಮ್ಮೆ ನಮ್ಮ ರ್ಯಾಲಿಯನ್ನ ಪೊಲೀಸರು ತಡೆದ್ರೆ, ಸರಿಯಿರಲ್ಲ. ಯಾರೇ ಬಂದ್ರೂ ನಮ್ಮನ್ನ ತಡೆಯೋಕೆ ಆಗಲ್ಲ ಎಂದು ಎಚ್ಚರಿಸಿದ್ದಾರೆ... ಬಿಬಿಎಂಪಿ, ವಕ್ಫ್ ಬೋರ್ಡ್ ಜಟಾಪಟಿ ನಡ್ವೆ, ಸ್ಥಳೀಯರೇ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ