ನವದೆಹಲಿ : ಭಾರತದ ಭೂಭಾಗ ಅತಿಕ್ರಮಿಸಲು ಚೀನಾ ಯೋಧರು ಯತ್ನ ನಡೆಸಿದ್ದು ಇದರಿಂದ ಮತ್ತೆ ಭಾರತ ಚೀನಾ ಯೋಧರ ನಡುವೆ ಘರ್ಷಣೆ ನಡೆದಿದೆ.
ಭಾರತದ ಪ್ರತಿರೋಧದಿಂದ ಬೆಚ್ಚಿಬಿದ್ದ ಚೀನಾ ಯೋಧರು ಯುದ್ಧದಿಂದ ಹಿಂದೆ ಸರಿದಿದ್ದಾರೆ. ಈ ಘರ್ಷಣೆ ವೇಳೆ ಭಾರತದ ನಾಲ್ವರು ಸೈನಿಕರಿಗೆ ಗಾಯವಾಗಿದ್ದು ಮತ್ತು ಚೀನಾದ 20 ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ.