ಕೊವಿಡ್ ಲಸಿಕೆ ಕೊಟ್ಟ ಭಾರತಕ್ಕೆ ಹನುಮಂತನ ಸಂಜೀವಿನಿಗೆ ಹೋಲಿಸಿ ಹೊಗಳಿದ ಬ್ರೆಜಿಲ್

ಶನಿವಾರ, 23 ಜನವರಿ 2021 (10:20 IST)
ನವದೆಹಲಿ: ಭಾರತದಲ್ಲಿ ತಯಾರಾದ ಕೊವಿಡ್ ಲಸಿಕೆಯನ್ನು ತನಗೆ ಹಂಚಿದ್ದಕ್ಕೆ ಬ್ರೆಜಿಲ್ ವಿಶಿಷ್ಟವಾಗಿ ಧನ್ಯವಾದ ಸಲ್ಲಿಸಿದೆ. ಹನುಮಂತನ ಸಂಜೀವಿನಿಗೆ ಹೋಲಿಸಿ ಭಾರತವನ್ನು ಬ್ರೆಜಿಲ್ ಹೊಗಳಿದೆ.


ಹನುಮಂತ ಸಂಜೀವಿ ಹೊತ್ತು ತರುವ ಚಿತ್ರ ಪ್ರಕಟಿಸಿ ಧನ್ಯವಾದ ಸಲ್ಲಿಸಿರುವ ಬ್ರೆಜಿಲ್, ಭಾರತ ತನಗೆ 2 ಮಿಲಿಯನ್ ಡೋಸ್ ಲಸಿಕೆ ನೀಡಿರುವುದಾಗಿ ಮಾಹಿತಿ ನೀಡಿದೆ. ನಮಗೆ ಸಹಾಯ ಮಾಡಿದ್ದಕ್ಕೆ ಧನ್ಯವಾದಗಳು ಎಂದು ಟ್ವಿಟರ್ ಮೂಲಕ ಭಾರತಕ್ಕೆ ನಮನ ಸಲ್ಲಿಸಿದೆ. ಈ ಮೊದಲು ಬ್ರೆಜಿಲ್ ಭಾರತೀಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಲಸಿಕೆ ನೀಡುವಂತೆ ಮನವಿ ಮಾಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ