ಭಾರತದೊಂದಿಗೆ ಒಪ್ಪಂದ ಮಾಡಿಕೊಂಡು ತಾನೇ ಮುರಿದ ಚೀನಾ

ಸೋಮವಾರ, 25 ಜನವರಿ 2021 (07:46 IST)
ನವದೆಹಲಿ: ಪೂರ್ವ ಲಡಾಖ್ ನಲ್ಲಿ ಶಾಂತಿ ಸ್ಥಾಪನೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ತಾನೇ ಮುರಿದುಕೊಂಡ ಚೀನಾ ಇಲ್ಲಿ ಸೇನೆ ಜಮಾವಣೆ ಆರಂಭಿಸಿದೆ.


ಉಭಯ ದೇಶಗಳ ಸೈನಿಕರ ನಡುವೆ ಇಲ್ಲಿ ಘರ್ಷಣೆ ನಡೆದ ಬಳಿಕ ವಿಶ್ವಾಸವೃದ್ಧಿಗಾಗಿ ಚೀನಾವೇ ಶಾಂತಿ ಸ್ಥಾಪನೆ ಮಾಡಲು ಒಪ್ಪಂದಕ್ಕೆ ಮುಂದಾಗಿತ್ತು. ಇದನ್ನು ಉಭಯ ದೇಶಗಳೂ ಒಪ್ಪಿಕೊಂಡಿದ್ದವು. ಆದರೆ ಈಗ ಚೀನಾವೇ ಆ ಒಪ್ಪಂದ ಮುರಿದುಕೊಂಡಿದ್ದು, ಇಲ್ಲಿ ಸೈನಿಕರ ಸಂಖ್ಯೆ ಹೆಚ್ಚಿಸಿದೆ. ಅಲ್ಲದೆ ಸೇನೆಯ ಚಟುವಟಿಕೆಗಳನ್ನೂ ಇಲ್ಲಿ ಚುರುಕುಗೊಳಿಸಿದೆ. ಈ ಮೂಲಕ ತನ್ನ ಮಾತನ್ನು ತಾನೇ ಮುರಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ