ಗ್ಯಾರಂಟಿಗೆ ದುಡ್ಡಿಲ್ಲ, ಸಿಎಂ ಆದಮೇಲೇ ಹಣ ಸಾಲಲ್ಲ ಅಂತ ಗೊತ್ತಾಗಿದ್ದು ಎಂದ ಮುಖ್ಯಮಂತ್ರಿ

Krishnaveni K

ಮಂಗಳವಾರ, 11 ಮಾರ್ಚ್ 2025 (10:36 IST)
ಹೈದರಾಬಾದ್: ಗ್ಯಾರಂಟಿಗೆ ದುಡ್ಡು ಸಾಕಾಗ್ತಿಲ್ಲ. ಸಿಎಂ ಆದಮೇಲೆಯೇ ಈಗ ಇರುವ ಆದಾಯ ಸಾಕಾಗಲ್ಲ ಎಂದು ಗೊತ್ತಾಗಿದ್ದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಕೊಡುಗೆಯಿದೆ. ಇತ್ತೀಚೆಗೆ ಕಾಂಗ್ರೆಸ್ ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಾಗಲೂ ಉಚಿತ ಗ್ಯಾರಂಟಿ ಯೋಜನೆಗಳ ಭರವಸೆ ನೀಡುತ್ತಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಗ್ಯಾರಂಟಿ ಯೋಜನೆ ಭರವಸೆ ನೀಡಿ ಸಕ್ಸಸ್ ಕಂಡ ಬಳಿಕ ತೆಲಂಗಾಣದಲ್ಲೂ ಅದೇ ಫಾರ್ಮುಲಾ ಮಾಡಿತ್ತು. ಹೀಗಾಗಿ ತೆಲಂಗಾಣದಲ್ಲೂ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂತು.

ಆದರೆ ಈಗ ಗ್ಯಾರಂಟಿಗೆ ಹಣ ಸಾಕಾಗ್ತಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ತಿಂಗಳ ಗಳಿಕೆ 18500 ಕೋಟಿ ರೂ. ಉಳಿಕೆ ಕೇವಲ 5500 ಕೋಟಿ ರೂ. ಇದು ಸಾಲಲ್ಲ ಎಂದು ಸಿಎಂ ಆದಮೇಲೆಯೇ ಗೊತ್ತಾಗಿದ್ದು ಎಂದಿದ್ದಾರೆ.

ಹೀಗಾಗಿ ತೆಲಂಗಾಣದಲ್ಲಿ ಈಗ ಗ್ಯಾರಂಟಿಗೆ ಹಣ ಹೊಂದಿಸಲು ಪರದಾಡುವ ಪರಿಸ್ಥಿತಿ ಬಂದಿದೆ. ಪ್ರತೀ ತಿಂಗಳು ಗ್ಯಾರಂಟಿಗೆ ಮೀಸಲಿಡಲು ನಮ್ಮಲ್ಲಿ ಹಣವಿಲ್ಲ. ಕ್ಷೇತ್ರ ವಿಂಗಡನೆ ಬಗ್ಗೆ ಚರ್ಚೆಯಾಗುವ ಬದಲು ದೇಶದಾದ್ಯಂತ ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಯಾಗಬೇಕಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ