ಲಿಫ್ಟ್ ಕೊಡಿಸುವುದಾಗಿ ನಂಬಿಸಿ ಶೀಲಕೆಡಿಸಿದರು

ಭಾನುವಾರ, 24 ಜನವರಿ 2021 (08:14 IST)
ಭೋಪಾಲ್: ಲಿಫ್ಟ್ ಕೊಡುವುದಾಗಿ ನಂಬಿಸಿ ನಾಲ್ವರು ದುರುಳರು ಯುವತಿಯ ಶೀಲಕೆಡಿಸಿದ ಘಟನೆ ಮಧ‍್ಯಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.


ಖಾಸಗಿ ಕಂಪನಿಯ ನೌಕರಳಾಗಿದ್ದ ಯುವತಿಯ ಸಹೋದ್ಯೋಗಿಗಳೇ ಈ ಕೃತ್ಯವೆಸಗಿದ್ದಾರೆ. ಮನೆಗೆ ಮರಳುವಾಗ ಸಂಜೆ ವೇಳೆ ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿದ ಆರೋಪಿಗಳು ಕಾರಿನೊಳಗೇ ಮಾನಭಂಗ ಮಾಡಿದ್ದಾರೆ. ಕಾಮತೃಷೆ ತೀರಿಸಿಕೊಂಡ ಬಳಿಕ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ