ಪರಸಂಗ ಮಾಡಲು ಹೊರಟ ಗಂಡನಿಗೆ ಹೆಂಡತಿ ತಂದಳು ಈ ಗತಿ!

ಭಾನುವಾರ, 24 ಜನವರಿ 2021 (07:51 IST)
ಚೆನ್ನೈ: ತನ್ನನ್ನು ಬಿಟ್ಟು ಬೇರೊಬ್ಬಳನ್ನು ಮದುವೆಯಾಗಲು ಹೊರಟ ಪತಿಯನ್ನು 38 ವರ್ಷದ ಮಹಿಳೆ ಹತ್ಯೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಇಬ್ಬರು ಮಕ್ಕಳ ತಂದೆಯಾಗಿದ್ದ ಪತಿ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಆತ ಬೇರೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜನೆ ರೂಪಿಸಿದ್ದ. ಇದು ತಿಳಿದು ದಂಪತಿ ನಡುವೆ ಕಲಹವಾಗಿತ್ತು. ಇದೇ ಸಿಟ್ಟಿನ ಭರದಲ್ಲಿ ಪತ್ನಿ ಪತಿಯನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೇ ಖುದ್ದಾಗಿ ಪೊಲೀಸರ ಬಳಿ ತೆರಳಿ ಶರಣಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ