ಪ್ರಾರ್ಥನೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಮು ಘರ್ಷಣೆ: ಭೋಪಾಲ್ ಉದ್ವಿಗ್ನ

ಬುಧವಾರ, 31 ಮೇ 2017 (11:38 IST)
ಭೋಪಾಲ್:ಪ್ರಾಥನೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ-ಮುಸ್ಲೀಂ ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು 6 ಜನರಿಗೆ ಗಾಯಗಳಾಗಿದ್ದು, ಓಲ್ಡ್ ಭೋಪಾಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
 
ಇಲ್ಲಿನ ಹಮೀದಿಯಾ ಆಸ್ಪತ್ರೆ ಸಮೀಪದಲ್ಲಿ ಎರಡು ಪ್ರತ್ಯೇಕ ಸಮುದಾಯಗಳು ಪ್ರಾರ್ಥನೆ ಸಲ್ಲಿಸುತ್ತಿತ್ತು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಎರಡು ಸಮುದಾಯಗಳ ನಡುವೆ ಕೋಮು ಘರ್ಷಣೆ ಆರಂಭವಾಗಿದೆ. ಇದೇ ವೇಳೆ ಪಸ್ಪರ ಕಲ್ಲುತೂರಾಟವೂ ನಡೆದಿದೆ. ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
 
ಈ ವೇಳೆ ಇನ್ನಷ್ಟು ಉದ್ರಿಕ್ತಗೊಂಡ ಗುಂಪು ಪೊಲೀಸರ ವಾಹನಗಳು ಸೇರಿದಂತೆ ಹಲವಾರು ಸಾರ್ವಜನಿಕ ವಾಹನಗಳಿಗೂ ಬೆಂಕಿ ಹಚ್ಚವೆ. ಕಲ್ಲುತೂರಾಟದಿಂದಾಗಿ ಹಲವಾರು ಅಂಗಡಿ ಮುಗ್ಗಟುಗಳನ್ನು ಮುಚ್ಚಲಾಗಿದೆ. ಸಧ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಓಲ್ಡ್ ಭೋಪಾಲ್ ನಲ್ಲಿ ಭಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
 

ವೆಬ್ದುನಿಯಾವನ್ನು ಓದಿ