ಮೋದಿ ಧ್ಯಾನವನ್ನು ಪ್ರಸಾರ ಮಾಡಿದ್ದಲ್ಲಿ ಚುನಾವಣಾ ಆಯೋಗಕ್ಕೆ ದೂರು: ಮಮತಾ ಬ್ಯಾನರ್ಜಿ

sampriya

ಬುಧವಾರ, 29 ಮೇ 2024 (19:03 IST)
Photo By X
ಕೋಲ್ಕತ್ತ: ಕನ್ಯಾಕುಮಾರಿಯ ವಿವೇಕಾನಂದರ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನವನ್ನು ಪ್ರಸಾರ ಮಾಡಿದರೆ ಚುನಾವಣಾ ಆಯೋಗಕ್ಕೆ (ಇಸಿ) ದೂರು ನೀಡುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ನೀತಿ ಸಂಹಿತೆ ಜಾರಿಯಲ್ಲಿದ್ದಿ, ಧ್ಯಾನ ಮಾಡುವುದನ್ನು ಪ್ರಸಾರ ಮಾಡಿದರೆ ನೀತಿ ಸಂಹಿತೆ ಉಲ್ಲಂಘನೆ ಆದ ಹಾಗೇ. ಆದ್ದರಿಂದ ಧ್ಯಾನ ಮಾಡುವುದನ್ನು ಪ್ರಸಾರ ಮಾಡಿದರೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

'ಯಾರೇ ಆದರೂ ಧ್ಯಾನ ಮಾಡಲು ಕ್ಯಾಮೆರಾಗಳ ಅಗತ್ಯವಿದೆಯೇ? ಇದು ಕೂಡ ಪ್ರಚಾರ ಮಾಡುವ ವಿಧಾನವಾಗಿದೆ' ಎಂದು ಮಮತಾ ಆರೋಪಿಸಿದರು.

ಲೋಕಸಭಾ ಚುನಾವಣೆಯ ಕೊನೆಯ ಹಾಗೂ ಏಳನೇ ಹಂತದ ಪ್ರಚಾರದ ಅಭಿಯಾನ ಜೂನ್ 30ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಸ್ವಾಮಿ ವಿವೇಕಾನಂದ ಧ್ಯಾನ ಕೈಗೊಂಡಿದ್ದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನ ಕೈಗೊಳ್ಳಲಿದ್ದಾರೆ. ಇದೀಗ ಮೋದಿ ಧ್ಯಾನಕ್ಕೆ ತೆರಳುವ ಬಗ್ಗೆ ವಿಪಕ್ಷಗಳು ಟೀಕೆ ಮಾಡುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ