ಹಗಲಿನಲ್ಲಿ ಕಾಂಡೋಮ್ ಜಾಹೀರಾತು ಪ್ರಸಾರಕ್ಕೆ ನಿರ್ಬಂಧ

ಮಂಗಳವಾರ, 12 ಡಿಸೆಂಬರ್ 2017 (11:46 IST)
ಮಾಧ್ಯಮಗಳಲ್ಲಿ ಕಾಂಡೋಮ್ ಜಾಹೀರಾತುಗಳನ್ನು ಪ್ರಸಾರ ಮಾಡಲು ಕೇಂದ್ರ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಬೆಳಿಗ್ಗೆ 6ರಿಂದ ರಾತ್ರಿ 10ಗಂಟೆವರೆಗೆ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ನಿರ್ಬಂಧ ಹೇರಿದೆ.
 
ಕಾಂಡೋಮ್ ಜಾಹೀರಾತುಗಳು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಸಭ್ಯ ಜಾಹೀರಾತುಗಳಿಂದ ಅನಾರೋಗ್ಯಕರ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
 
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಾತ್ರವೇ ಕಾಂಡೋಮ್‍‍ ಜಾಹೀರಾತುಗಳನ್ನು ಪ್ರಸಾರ ಮಾಡಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ.
 
ಕೆಲವು ವಾಹಿನಿಗಳು ಪದೇ ಪದೇ ಕಾಂಡೋಮ್ ಜಾಹೀರಾತುಗಳನ್ನ ಪ್ರಸಾರ ಮಾಡುತ್ತಿದ್ದು, ಇವು ಅಸಭ್ಯವಾಗಿವೆ. ಅದರಲ್ಲೂ ಅನೇಕ ದೂರುಗಳು ಬಂದಿರುವುದಾಗಿ ಸಚಿವಾಲಯ ತಿಳಿಸಿದೆ. ದೂರುಗಳ ಆಧಾರದ ಮೇಲೆ ಇಂತಹ ಜಾಹೀರಾತುಗಳ ಸಮಯವನ್ನು ನಿಯಂತ್ರಿಸಲು ಆಗುವುದಿಲ್ಲ. ಸಚಿವಾಲಯವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್  ಕೌನ್ಸಿಲ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದಷ್ಟೇ ಸಚಿವಾಲಕ್ಕೆ ಪತ್ರ ಬರೆದಿತ್ತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ