ಗುಜರಾತ್ ಫಲಿತಾಂಶದಿಂದ ಬಿಜೆಪಿಗೆ ಸಂದೇಶ– ರಾಗಾ

ಮಂಗಳವಾರ, 19 ಡಿಸೆಂಬರ್ 2017 (15:52 IST)
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದಿದ್ದರೂ, ಬಿಜೆಪಿ ಪಕ್ಷಕ್ಕೆ ಮರೆಯಲಾಗದ ಸಂದೇಶ ರವಾನೆಯಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಮರೆಯಲಾಗದ ಹೊಡೆದ ಬಿದ್ದಿದೆ. ಚುನಾವಣಾ ಫಲಿತಾಂಶದ ಮೂಲಕ ಗುಜರಾತಿನ ಜನರು ಪ್ರಧಾನಮಂತ್ರಿಗೆ ಹಾಗೂ ಪಕ್ಷಕ್ಕೆ ಕೋಪ ತೋರಿಸಿಕೊಟ್ಟಿದ್ದಾರೆ.

ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ ಎಂದು ಬೀಗುತ್ತಿದ್ದ ಪ್ರಧಾನಿ ಮೋದಿ ಅವರು ತವರಿನಲ್ಲೇ ಗೆಲುವಿಗಾಗಿ ಪ್ರಯಾಸಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇದು ಬಿಜೆಪಿ ಪತನಕ್ಕೆ ನಾಂದಿ ಹಾಡಲಿದೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ