'ಕಮಲ', 'ಕೈ'ಗೆ ನಮ್ಮನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ: ಆಪ್

ಶನಿವಾರ, 18 ಜೂನ್ 2016 (15:09 IST)
ಸಂಸದೀಯ ಕಾರ್ಯದರ್ಶಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೆಹಲಿ ಸರ್ಕಾರವನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಆಮ್ ಆದ್ಮಿ ಹೇಳಿದೆ.

ತಮ್ಮ ಪಕ್ಷದ ಮೇಯರ್‌ಗಳಿಗೆ ಸೌಲಭ್ಯಗಳನ್ನು ಒದಗಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಡಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದವು. ಕಾನೂನುಬಾಹಿರವಾಗಿ ಸಭಾ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಗಳನ್ನು ಸೃಷ್ಟಿಸಿದವು. ಡಿಮ್‌ಸಿ ಕಾಯಿದೆಯಲ್ಲಿ ಈ ಸ್ಥಾನಗಳೇ ಇಲ್ಲ. ಸ್ಥಾಯಿ ಸಮಿತಿಯ ಅಧ್ಯಕ್ಷ ಸಹ ಇದರ ಫಲಾನುಭವಿಯಾಗಿದ್ದಾರೆ ಎಂದು ಮ್ ಆದ್ಮಿ ಪಕ್ಷದ ದೆಹಲಿ ಸಂಚಾಲಕ ದಿಲೀಪ್ ಪಾಂಡೆ ಆರೋಪಿಸಿದ್ದಾರೆ.  
 
ಕಾಯ್ದೆಗೆ ತಿದ್ದುಪಡಿ ಮಾಡಿ ದಿಲ್ಲಿಯ ಪಾಲಿಕೆ ಸದಸ್ಯರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿವೆ. ಆದರೆ ನಮ್ಮ ಸರಕಾರ ಒಂದು ರೂಪಾಯಿ ನೀಡದೆ ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಿದೆ. ಇಷ್ಟೆಲ್ಲಾ ಮಾಡಿರುವ ಕೈ ಮತ್ತು ಕಮಲಕ್ಕೆ ನಮ್ಮನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ದಿಲೀಪ್ ಪಾಂಡೆ ಗುಡುಗಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ