ನಿತೀನ್ ಪಟೇಲ್‌ಗೆ ಬೆಂಬಲ ಘೋಷಿಸಿ ಭಿನ್ನಮತದ ಲಾಭ ಪಡೆಯಲು ಯತ್ನಿಸಿದ ಕಾಂಗ್ರೆಸ್
ಭಾನುವಾರ, 31 ಡಿಸೆಂಬರ್ 2017 (13:53 IST)
ಗುಜರಾತ್ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತದ ಲಾಭ ಪಡೆಯಲು ಕಾಂಗ್ರೆಸ್ ಯತ್ನಿಸಿದ್ದು, ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರು ಸರ್ಕಾರ ರಚಿಸಿದರೆ ಅವರಿಗೆ ಬೆಂಬಲ ನೀಡಲಾಗುವುದು ಎಂದು ಗುಜರಾತ್ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಘೋಷಿಸಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ವೀರ್ಜಿ ಥುಮ್ಮರ್ ಹಾಗೂ ವಕ್ತಾರ ಮನೀಷ್ ಜೋಷಿ ಅವರು ನಿತಿನ್ ಪಟೇಲ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿಯಿಂದ ಹೊರಬಂದು ಸರ್ಕಾರ ರಚನೆ ಮಾಡಿದರೆ ಅವರಿಗೆ ಕಾಂಗ್ರೆಸ್ ಪಕ್ಷದ ಶಾಸಕರಿಂದ ಬಾಹ್ಯ ಬೆಂಬಲ ನೀಡಲಾಗುವುದು ಎಂದು ಮುಕ್ತ ಆಹ್ವಾನ ನೀಡಿದ್ದಾರೆ.
ಅಗತ್ಯ ಪ್ರಮಾಣದ ಶಾಸಕರೊಂದಿಗೆ ಬಿಜೆಪಿಯಿಂದ ಹೊರಬಂದರೆ ಗುಜರಾತ್ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಬಹುದು ಎಂದಿದ್ದಾರೆ. ಈಗಾಗಲೇ ಹಾರ್ದಿಕ್ ಪಟೇಲ್ ಕೂಡ ನಿತೀನ್ ಪಟೇಲ್ ಅವರಿಗೆ ಆಹ್ವಾನ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.