ಕಾಂಗ್ರೆಸ್ ಶ್ರೀಮಂತರ ಪಕ್ಷ: ರಾಜನಾಥ್ ಸಿಂಗ್

ಶನಿವಾರ, 4 ಜೂನ್ 2016 (11:06 IST)
'ಕಾಂಗ್ರೆಸ್ ಶ್ರಿಮಂತರ ಪಕ್ಷ' ಎಂದು ಟೀಕಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ 'ಬಿಜೆಪಿ ಬಡವರ ಪಕ್ಷ' ಎಂದಿದ್ದಾರೆ
 
"ತಮ್ಮ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೀದರ್‌ನಲ್ಲಿ ಆಯೋಜಿಸಲಾಗಿದ್ದ ವಿಕಾಸ ಪರ್ವ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಜಾರಿಯಲ್ಲಿ ತಂದ ಎಲ್ಲ ಯೋಜನೆಗಳು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸುವ ಗುರಿಯನ್ನು ಹೊಂದಿದ್ದವು. ಆದರೆ ನಾವು ಬಡವರ, ನಿರುದ್ಯೋಗಿಗಳ, ರೈತರ, ಮಹಿಳೆಯರ ಮತ್ತು ದಿವ್ಯಾಂಗರ ಕಲ್ಯಾಣಕ್ಕೆ ಪೂರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ ಮತ್ತು ಈ ದಿಶೆಯಲ್ಲಿ ಮಹತ್ವದ ಯಶವನ್ನು ಸಹ ಕಂಡಿದ್ದೇವೆ", ಎಂದು ಹೇಳಿದ್ದಾರೆ.
 
"ಬಡತನ ನಿವಾರಣೆ ಯೋಜನೆಗಳ ಅಂಕಿಅಂಶಗಳು ಸಾರ್ವಜನಿಕರಿಗೆ ಸುಲಭವಾಗಿ ಉಪಲಬ್ಧವಾಗುತ್ತಿವೆ. ಯಾರು ಬೇಕಾದರೂ ಇದನ್ನು ಪರಿಶೀಲಿಸುವ ಮೂಲಕ ನನ್ನ ಹೇಳಿಕೆ ಸತ್ಯ ಎಂಬುನ್ನು ಖಚಿತಗೊಳಿಸಿಕೊಳ್ಳಬಹುದು" ಎಂದು ಸಿಂಗ್ ತಿಳಿಸಿದ್ದಾರೆ. 
 
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸನ್ನು ಎತ್ತರಿಸಿದ್ದು ನಮ್ಮ ಪ್ರಮುಖ ಸಾಧನೆಯಾಗಿದೆ ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ, ಸೂಪರ್ ಪವರ್ ರಾಷ್ಟ್ರಗಳು ಭಾರತ ಅಸ್ತಿತ್ವದಲ್ಲಿಲ್ಲ ಎಂಬಂತೆ ನಟಿಸುತ್ತಿದ್ದರು. ಆದರೆ ಈಗ ಅವರು ತಮ್ಮ ಅಂತಾರಾಷ್ಟ್ರೀಯ ನೀತಿಗಳ ರಚನೆ ಸಂದರ್ಭದಲ್ಲಿ ಭಾರತವನ್ನು ಕೇಂದ್ರಸ್ಥಾನದಲ್ಲಿಟ್ಟುಕೊಳ್ಳುತ್ತಿದ್ದಾರೆ," ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ