ಕಾಂಗ್ರೆಸ್‌ ಪಕ್ಷ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ-ಪಿಎಂ

geetha

ಬುಧವಾರ, 7 ಫೆಬ್ರವರಿ 2024 (19:40 IST)
ನವದೆಹಲಿ :-ಕಾಂಗ್ರೆಸ್ ನಾಯಕರು ಮತ್ತು ಅವರ ನೈತಿಕತೆಗೆ ಯಾವುದೇ ಗ್ಯಾರಂಟಿ ಇಲ್ಲ.  ಆದರೂ ಅವರು ಮೋದಿಯವರ ಗ್ಯಾರಂಟಿಗಳನ್ನು ಪ್ರಶ್ನಿಸಲು ಬಯಸುತ್ತಾರೆ. ಕಾಂಗ್ರೆಸ್ ಮೇಲೆ ದೇಶ ಏಕೆ ಕೋಪಗೊಂಡಿತು? ಜನರಿಗೆ ಯಾಕೆ ಇಷ್ಟೊಂದು ಕೋಪ ಬಂತು? ನಾನು ಹಾಗೆ ಹೇಳಿದ್ದರಿಂದ ಅಲ್ಲ. ಅವರು ಬಿತ್ತಿದ ಫಲ ಅದು ಎಂದು ಜಮ್ಮು-ಕಾಶ್ಮೀರ ವಿಚಾರದಲ್ಲಿ ನೆಹರು ಅವರು ಮಾಡಿದ ವಿಚಾರವನ್ನು ಎತ್ತಿಹಿಡಿದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಈ ಬಾರಿ 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದಾರೆ. ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಸಾಮರ್ಥ್ಯ, ಶಕ್ತಿ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.  

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಕಳೆದ ವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ '400 ಪಾರ್' ಭಾಷಣ ತುಂಬಾ ಮನೋರಂಜನಾತ್ಮಕವಾಗಿತ್ತು ಎಂದು ವ್ಯಂಗ್ಯವಾಡಿದರು. ಖರ್ಗೆಯವರು ಸುದೀರ್ಘವಾಗಿ ಮಾತನಾಡಿರುವುದು ನನಗೆ ಸಂತಸ ತಂದಿದೆ. ಅಂದು ವಿಶೇಷ ಕಮಾಂಡರ್‌ಗಳು ಇರಲಿಲ್ಲ ಅದಕ್ಕಾಗಿ ಅವರು ಸ್ವಾತಂತ್ರ್ಯದಿಂದ ಮಾತನಾಡಿದ್ದಾರೆ. 400 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲ್ಲಿ ಎಂದು ಆಶೀರ್ವಾದ ಮಾಡಿದ್ದಕ್ಕಾಗಿ ಧನ್ಯವಾದಗಳು. ನನಗೆ ಆ ದಿನ ಹೇಳಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಈಗ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಅಂದು ಖರ್ಗೆಯವರು  'ಐಸಾ ಮೌಕಾ ಕಹಾ ಮಿಲಾ ಹೋಗಾ' ಹಾಡನ್ನು ಕೇಳಿ ಬಂದಿರಬಹುದು ಎಂದು ವ್ಯಂಗ್ಯವಾಡಿದರು. 

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ