PM Modi: ತಲೆಯಿಲ್ಲದ ಮೋದಿ ಫೋಟೋ ಪ್ರಕಟಿಸಿ ಕಾಂಗ್ರೆಸ್ ವ್ಯಂಗ್ಯ: ಬಿಜೆಪಿ ಆಕ್ರೋಶ

Krishnaveni K

ಮಂಗಳವಾರ, 29 ಏಪ್ರಿಲ್ 2025 (13:57 IST)
Photo Credit: X
ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವಾಗ ಇಡೀ ದೇಶ ಒಗ್ಗಟ್ಟಾಗಿರಬೇಕು. ಆದರೆ ಇದೀಗ ಕಾಂಗ್ರೆಸ್ ಪಕ್ಷ ತನ್ನ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿಯ ತಲೆಯಿಲ್ಲದ ಫೋಟೋವೊಂದನ್ನು ಪ್ರಕಟಿಸಿದ್ದು, ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಪಹಲ್ಗಾಮ್ ಉಗ್ರ ದಾಳಿಯ ಹೊಣೆಯನ್ನು ಮೋದಿ ಹೊತ್ತುಕೊಂಡು ರಾಜೀನಾಮೆ ನೀಡಬೇಕು ಎಂದು ಕೆಲವು ಕಾಂಗ್ರೆಸ್ಸಿಗರು ಆಗ್ರಹಿಸಿದ್ದರು. ಇದೀಗ ಕಾಂಗ್ರೆಸ್ ತನ್ನ ಎಕ್ಸ್ ಪೇಜ್ ನಲ್ಲಿ ಕುರ್ತಾ ಧರಿಸಿರುವ ಸಾಂಕೇತಿಕವಾಗಿ ಮೋದಿಯನ್ನು ಹೋಲುವ ತಲೆಯಿಲ್ಲದ ವ್ಯಕ್ತಿಯ ಫೋಟೋ ಪ್ರಕಟಿಸಿದೆ.

ಜೊತೆಗೆ ‘ಜವಾಬ್ಧಾರಿ ಹೊತ್ತುಕೊಳ್ಳಬೇಕಾದ ಸಮಯದಲ್ಲಿ ನಾಪತ್ತೆ’ ಎಂದು ಬರೆದುಕೊಂಡಿದೆ. ಕಾಂಗ್ರೆಸ್ ನ ಈ ಪೋಸ್ಟ್ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್ ಮುಸ್ಲಿಂ ಲೀಗ್ 2.0 ಆಗಿ ಬದಲಾಗುತ್ತಿರುವುದಕ್ಕೆ ಉದಾಹರಣೆಯಾಗಿದೆ. ಪ್ರಧಾನಿ ಮೋದಿ ಇತ್ತೀಚೆಗೆ ಪಾಕಿಸ್ತಾನಕ್ಕೆ ಅರ್ಥವಾಗಲು ಇಂಗ್ಲಿಷ್ ನಲ್ಲಿ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನ ಮತ್ತು ಅದರ ಸಹ ಯಾತ್ರಿಕನಾಗಿರುವ ಕಾಂಗ್ರೆಸ್ ಪಕ್ಷ ಎಷ್ಟು ಬೇಕಾದರೂ ಬೆದರಿಕೆ ಹಾಕಲಿ. ಹೊಸ ಭಾರತ ಉದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ