ಕೈ ಮೂಳೆ ಮುರಿದು ಕೊಂಡಿದ್ದಾರೆಯೇ ಸೋನಿಯಾ ಗಾಂಧಿ?

ಗುರುವಾರ, 4 ಆಗಸ್ಟ್ 2016 (17:14 IST)
ವಾರಣಾಸಿಯಲ್ಲಿ ರೋಡ್‌ ಶೋ ನಡೆಸುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರೋಡ್ ಶೋ ನಡೆಸುತ್ತ ಕುಸಿದು ಬಿದ್ದಿದ್ದಾಗ ಕೈ ಮೂಳೆಯನ್ನು ಸಹ ಮುರಿದು ಕೊಂಡಿದ್ದು ಅವರೀಗ ಐಸಿಯುನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ತೀವ್ರ ಜ್ವರ ಹಾಗೂ ನಿರ್ಜಲೀಕರಣದಿಂದ ಕುಸಿದು ಬಿದ್ದ ಅವರನ್ನು ದೆಹಲಿಯ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.  

ವರದಿಗಳ ಪ್ರಕಾರ, ಸೋನಿಯಾ ಅವರು ಈಗಲೂ ಸಹ ತೀವ್ರ ನಿಗಾ ಘಟಕದಲ್ಲಿದ್ದು ಈ ವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಗಳು ಕಡಿಮೆ.

"ಸೋನಿಯಾ ಗಾಂಧಿ ಅವರನ್ನು ಸರ್‌ ಗಂಗಾರಾಮ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಲ್‌ವುನಾಲಜಿ ವಿಭಾಗದ ಡಾ| ಅರುಪ್‌ ಬಸು ಮತ್ತು ಅವರ ತಂಡದವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನಿರ್ಜಲೀಕರಣದಿಂದ ಬಳಲುತ್ತಿದ್ದರು. ಅವರ ದೇಹ ಸ್ಥಿತಿ ಈಗ ಸುಧಾರಿಸಿದ್ದು ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ', ಎಂದು ಸರ್‌ ಗಂಗಾ ರಾಮ್‌ ಆಸ್ಪತ್ರೆಯ ಅಧ್ಯಕ್ಷರಾಗಿರುವ ಡಾ. ಡಿ. ಎಸ್‌ ರಾಣಾ ಅವರು ಬುಧವಾರ ಹೊರಡಿಸಿರುವ ಮೆಡಿಕಲ್‌ ಬುಲೆಟಿನ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ