ಸಹೋದ್ಯೋಗಿ ಜೊತೆ ಲವ್ ಅಫೇರ್: ಪೊಲೀಸ್ ಪೇದೆ ಮಾಡಿದ ಕೆಲಸವೇನು ಗೊತ್ತಾ?!
ಬುಧವಾರ, 3 ಫೆಬ್ರವರಿ 2021 (09:44 IST)
ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸ್ ಪೇದೆಯೊಬ್ಬ ಪ್ರೇಮ ಪ್ರಕರಣ ವಿಫಲವಾದ ಹಿನ್ನಲೆಯಲ್ಲಿ ಸಹೋದ್ಯೋಗಿ ಮಹಿಳೆಗೇ ಗುಂಡು ಹಾರಿಸಿ ತಾನೂ ಶೂಟ್ ಮಾಡಿಕೊಂಡ ಘಟನೆ ನಡೆದಿದೆ.
ಇಬ್ಬರೂ ಒಂದೇ ಬ್ಯಾಚ್ ನ ಅಧಿಕಾರಿಗಳಾಗಿದ್ದರು. ಸಂತ್ರಸ್ತ ಮಹಿಳೆಯ ಮನೆಗೆ ಬಂದಿದ್ದ ಆರೋಪಿ ಪೇದೆ ಆಕೆಯೊಡನೆ ಕಿತ್ತಾಟ ನಡೆಸಿದ್ದಾನೆ. ಈ ವೇಳೆ ಆಕ್ರೋಶಗೊಂಡು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ತೀವ್ರ ಗಾಯಗೊಂಡು ಕುಸಿದುಬಿದ್ದಿದ್ದಾಳೆ. ಬಳಿಕ ಆತನೂ ತನಗೆ ತಾನು ಶೂಟ್ ಮಾಡಿಕೊಂಡಿದ್ದಾನೆ. ಗುಂಡಿನ ಶಬ್ಧ ಕೇಳಿ ನೆರೆಮನೆಯವರು ಓಡಿಬಂದಿದ್ದು ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.