ಮೊಟ್ಟೆ, ಮಾಂಸ ತಿನ್ನುವ ಮಕ್ಕಳು ನಂತರ ನರಭಕ್ಷಕರಾಗುತ್ತಾರೆ- ಬಿಜೆಪಿ ನಾಯಕನಿಂದ ವಿವಾದಾತ್ಮಕ ಹೇಳಿಕೆ
ಶುಕ್ರವಾರ, 1 ನವೆಂಬರ್ 2019 (09:07 IST)
ಭೋಪಾಲ್ : ಮೊಟ್ಟೆ, ಮಾಂಸ ತಿನ್ನುವ ಮಕ್ಕಳು ನರಭಕ್ಷಕರಾಗುತ್ತಾರೆ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ಗೋಪಾಲ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಕ್ಕಳಿಗೆ ಪೌಷ್ಟಿಕಾಂಶ ಒದಗಿಸುವ ನಿಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಆಹಾರದ ಜೊತೆಗೆ ಮೊಟ್ಟೆಗಳನ್ನು ನೀಡುವ ಬಗ್ಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮಾರ್ತಿ ದೇವಿ ನಿರ್ಧರಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಬಿಜೆಪಿ ನಾಯಕ ಗೋಪಾಲ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮಕ್ಕಳಿಗೆ ಮೊಟ್ಟೆಗಳನ್ನು ಕೊಡುತ್ತಾರೆ, ತಿನ್ನದವರಿಗೆ ತಿನ್ನುವಂತೆ ಒತ್ತಾಯಿಸುತ್ತಾರೆ. ಮೊಟ್ಟೆ ತಿನ್ನದವರಿಗೆ ಕೋಳಿ, ಮಟನ್ ಆಹಾರ ಕೊಡುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಾಂಸಹಾರವನ್ನು ಅನುಮತಿಸುವುದಿಲ್ಲ. ಇದನ್ನು ಬಾಲ್ಯದಲ್ಲಿ ತಿಂದಿದ್ದರೆ ದೊಡ್ಡವರಾದ ಮೇಲೆ ನರಭಕ್ಷರಾಗುತ್ತಿದ್ದೇವೆನೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.