ಎರಡು ತಿಂಗಳ ಬಳಿಕ 1 ಲಕ್ಷಕ್ಕಿಂತ ಕಡಿಮೆ ಕೊರೋನಾ ಪ್ರಕರಣ

ಮಂಗಳವಾರ, 8 ಜೂನ್ 2021 (10:21 IST)
ನವದೆಹಲಿ: ಪ್ರತಿನಿತ್ಯ ಲಕ್ಷಗಟ್ಟಲೆ ಕೊರೋನಾ ಪ್ರಕರಣಗಳ ಬಗ್ಗೆ ಸುದ್ದಿ ಕೇಳಿಬಂದು ಆತಂಕವಾಗುತ್ತಿತ್ತು. ಆದರೆ ಇದೀಗ ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ 1 ಲಕ್ಷಕ್ಕಿಂತ ಕಡಿಮೆ ಪ್ರಕರಣ ಕಂಡುಬಂದಿದೆ.


ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 86,498 ಕೊರೋನಾ ಪ್ರಕರಣಗಳು ಕಂಡುಬಂದಿವೆಯಷ್ಟೇ. ಇದು ಒಂದು ರೀತಿಯಲ್ಲಿ ಅನ್ ಲಾಕ್ ಗೆ ಸಿದ್ಧವಾದ ರಾಜ್ಯಗಳಿಗೆ ಸಮಾಧಾನಕರ ವಿಚಾರ.

ಕೊರೋನಾ ಪ್ರಕರಣ ಹೆಚ್ಚಳವಾದ ಬೆನ್ನಲ್ಲೇ ಹೆಚ್ಚಿನ ರಾಜ್ಯಗಳು ಲಾಕ್ ಡೌನ್ ಘೋಷಿಸಿದ್ದವು. ಕಟ್ಟು ನಿಟ್ಟನ ಕ್ರಮದಿಂದಾಗಿ ಇದೀಗ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಇದೀಗ ಕರ್ನಾಟಕ, ಕೇರಳ ಮುಂತಾದ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಮುಂದಿನ ವಾರದಲ್ಲಿ ತೆರವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ