ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ: ಪ್ರಧಾನಿ ಮೋದಿ ಘೋಷಣೆ

ಮಂಗಳವಾರ, 8 ಜೂನ್ 2021 (08:58 IST)
ನವದೆಹಲಿ: ದೇಶದಾದ್ಯಂತ 18-44 ವರ್ಷ ವಯೋಮಾನದವರಿಗೂ ಕೇಂದ್ರವೇ ಉಚಿತವಾಗಿ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ನಿನ್ನೆ ಸಂಜೆ ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.


ಇದುವರೆಗೆ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಕೇಂದ್ರ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ನೀಡುತ್ತಿತ್ತು. 18-44 ರ ವಯೋಮಾನದವರಿಗೆ ಆಯಾ ರಾಜ್ಯಗಳೇ ಲಸಿಕೆ ಖರೀದಿ ಮಾಡಬೇಕಿತ್ತು. ಆದರೆ ಈ ಸಂಬಂಧ ಕೆಲವು ರಾಜ್ಯಗಳು ಉಚಿತ ಲಸಿಕೆ ನೀಡುವಂತೆ ಕೇಂದ್ರಕ್ಕೆ ಮೊರೆಯಿಟ್ಟಿದ್ದವು. ಸುಪ್ರೀಂಕೋರ್ಟ್ ಕೂಡಾ ಉಚಿತ ಲಸಿಕೆ ಪೂರೈಸಲು ಸಲಹೆ ನೀಡಿತ್ತು.

ರಾಜ್ಯಗಳೇ ಖರೀದಿ ಮಾಡಬೇಕಾಗಿದ್ದಾಗ ಸೂಕ್ತವಾಗಿ ಲಸಿಕೆ ಸಿಗುತ್ತಿರಲಿಲ್ಲ. ಈಗ ಕೇಂದ್ರವೇ ರಾಜ್ಯಗಳಿಗೆ ಶೇ.75 ರಷ್ಟು ಮತ್ತು ಖಾಸಗಿಯವರಿಗೆ ಶೇ.25 ರಷ್ಟು ಲಸಿಕೆ ಪೂರೈಸಲು ಮುಂದಾಗಿದೆ. ರಾಜ್ಯಗಳ ಕೈಯಲ್ಲಿದ್ದ ಲಸಿಕೆ ಖರೀದಿ ಅಧಿಕಾರವನ್ನು ತನ್ನ ವಶಕ್ಕೆ ಪಡೆದುಕೊಂಡ ಕೇಂದ್ರ ಒಂದು ಲಸಿಕೆ, ಒಂದೇ ರಾಷ್ಟ್ರ ನೀತಿ ಜಾರಿಗೆ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ